ಚಿತ್ರರಂಗಕ್ಕೆ ಮತ್ತೊಂದು ಶಾಕ್: ಜನಪ್ರಿಯ ನಟ ಸಮೀರ್ ಖಾಖರ್ ವಿಧಿವಶ

ದೂರದರ್ಶನದ ಪ್ರಸಿದ್ಧ ಶೋ ‘ನುಕ್ಕಡ್’ ನಲ್ಲಿ ಖೋಪ್ಡಿ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ಹಿರಿಯ ನಟ ಸಮೀರ್ ಖಾಖರ್(71) ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಸತೀಶ್ ಕೌಶಿಕ್ ಅವರ ಸಾವಿನಿಂದ ಅಭಿಮಾನಿಗಳು ಇನ್ನೂ ತತ್ತರಿಸುತ್ತಿರುವಾಗ, ಇದು ಉದ್ಯಮಕ್ಕೆ ಮತ್ತೊಂದು ಹೊಡೆತವಾಗಿದೆ. ವರದಿಯ ಪ್ರಕಾರ, ಹಿರಿಯ ನಟ ಸಮೀರ್ ಅವರಿಗೆ ಮಂಗಳವಾರ ಉಸಿರಾಟದ ಸಮಸ್ಯೆ ಎದುರಿಸಿದ ನಂತರ ಮೂರ್ಛೆ ಹೋಗಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಐಸಿಯುಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಅವರ ಹೃದಯ ಕಾರ್ಯನಿರ್ವಹಣೆ ನಿಂತು ಬಹು ಅಂಗಾಂಗ ವೈಫಲ್ಯದ ನಂತರ ಅವರು ಮುಂಜಾನೆ ನಿಧನರಾಗಿದ್ದಾರೆ.

ಸಮೀರ್ ಖಾಖರ್ 90 ರ ದಶಕದ ಜನಪ್ರಿಯ ನಟರಾಗಿದ್ದರು. ಅವರು 1996 ರಲ್ಲಿ ಯುಎಸ್‌ಗೆ ತೆರಳಿದ ನಂತರ ನಟನೆಯಿಂದ ದೂರ ಉಳಿದರು. ಅವರು ‘ಪುಷ್ಪಕ್’, ‘ಶಾಹೆನ್‌ ಶಾ’, ‘ರಖ್ವಾಲಾ’, ‘ದಿಲ್‌ವಾಲೆ’, ‘ರಾಜಾ ಬಾಬು’ ಮುಂತಾದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read