ನಾಳೆಯಿಂದ ಹೆದ್ದಾರಿಗಳಲ್ಲಿ ವಾಹನ ಸಂಚಾರ ಗಣತಿ

  ದಾವಣಗೆರೆ: ಲೋಕೋಪಯೋಗಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ರಸ್ತೆ ಸಂಚಾರ ಸಮೀಕ್ಷೆಯನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ 139 ಸ್ಥಳಗಳಲ್ಲಿ ಕೈಗೊಳ್ಳಲಾಗಿದೆ.

ಫೆಬ್ರವರಿ 17 ರ ಬೆಳಿಗ್ಗೆ 6 ರಿಂದ ಫೆ. 24 ರ ಬೆಳಿಗ್ಗೆ 6 ಗಂಟೆಯವರೆಗೆ ಸತತವಾಗಿ 7 ದಿನಗಳ ಕಾಲ ಸಿ.ಸಿ ಕ್ಯಾಮರಾ ಮುಖಾಂತರ ವಾಹನ ಸಂಚಾರ ಗಣತಿಯನ್ನು ನಡೆಸಲಾಗುವುದು.

ಈ ಗಣತಿ ಕಾರ್ಯದಿಂದ ರಸ್ತೆಯಲ್ಲಿನ ವಾಹನ ದಟ್ಟಣೆ ಅರಿಯಲು ಹಾಗೂ ಇರುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ಅಗಲೀಕರಣ, ವಾಹನಗಳ ಸಂಚಾರ ಸುಗಮಗೊಳಿಸಲು, ಸಂಚಾರದಲ್ಲಿ ಸುರಕ್ಷತೆ ಉತ್ತಮಪಡಿಸಲು, ಅಪಘಾತ ತಡೆಯಲು ಗಣತಿಯಿಂದ ಸಹಕಾರಿಯಾಗಲಿದೆ. ವಾಹನ ಸವಾರರು ಗಣತಿಗೆ ಸಹಕರಿಸಲು ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read