ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ: ವಿಮೆ ರಿನಿವಲ್ ಗೆ ಸೆ. 10ರ ಗಡುವು: ನಂತರ ದಂಡ ಪ್ರಯೋಗ

ಶಿವಮೊಗ್ಗ: ವಾಹನಗಳ ವಿಮೆ ರಿನಿವಲ್ ಗೆ ಸೆ. 10 ರವರೆಗೆ ಗಡುವು ನೀಡಲಾಗಿದೆ. ನಂತರ ದಂಡ ವಿಧಿಸಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.

ವಾಹನಗಳ ವಿಮೆ ವಾಯಿದೆ ಅವಧಿ ಮುಗಿದಿದ್ದಲ್ಲಿ ತಕ್ಷಣವೇ ಅದನ್ನು ರಿನಿವಲ್ ಮಾಡಿಸಿಕೊಳ್ಳುವಂತೆ ಎಸ್ಪಿ ತಿಳಿಸಿದ್ದಾರೆ. ಕಳೆದ ಎರಡು ಮೂರು ವರ್ಷಗಳಲ್ಲಿ ಅಪಘಾತದಲ್ಲಿ ಮೃತಪಟ್ಟವರ ಹಲವರ ಕುಟುಂಬಕ್ಕೆ ಪರಿಹಾರ ದೊರೆತಿಲ್ಲ. ವಾಹನಗಳ ವಿಮೆ ರಿನಿವಲ್ ಮಾಡಿಸದೆ ಇರುವುದೇ ಇದಕ್ಕೆ ಕಾರಣವಾಗಿದೆ.

ಹೀಗಾಗಿ ಎಲ್ಲಾ ವಾಹನಗಳ ಮಾಲೀಕರು ವಿಮೆ ರಿನಿವಲ್ ಮಾಡಿಸಿಕೊಳ್ಳಬೇಕೆಂದು ತಿಳಿಸಲಾಗಿದ್ದು, ಸೆ. 10 ರವರೆಗೆ ಕಾಲಾವಕಾಶ ನೀಡಲಾಗಿದೆ. ನಂತರ ದಂಡ ವಿಧಿಸುವ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read