ವಾಹನ ಮಾಲೀಕರೇ ಗಮನಿಸಿ: ಯಾವುದೇ ರಾಜಕೀಯ ವ್ಯಕ್ತಿಗಳ ಫೋಟೋ, ಪಕ್ಷದ ಚಿಹ್ನೆ ಇದ್ರೆ ತೆಗೆಯಿರಿ

ಮಡಿಕೇರಿ: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ, ಬಸ್ ಹಾಗೂ ಇತರೆ ಯಾವುದೇ ವಾಹನಗಳ ಮೇಲೆ, ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಅಥವಾ ಪಕ್ಷಗಳನ್ನು ಬಿಂಬಿಸುವ ಬ್ಯಾನರ್ಸ್, ಬಿತ್ತಿಪತ್ರಗಳು ಹಾಗೂ ಇತರೇ ಚಿತ್ರಗಳನ್ನು ಪೂರ್ವಾನುಮತಿ ಇಲ್ಲದೆ ಪ್ರದರ್ಶಿಸುವಂತಿಲ್ಲ.

ಪ್ರದರ್ಶನದ ಬ್ಯಾನರ್ಸ್/ ಕಟೌಟ್ಸ್ ಇತರೆ ಚಿತ್ರಗಳನ್ನು 24 ಗಂಟೆಗಳ ಒಳಗಾಗಿ ಕಡ್ಡಾಯವಾಗಿ ತೆರವುಗೊಳಿಸುವುದು. ತಪ್ಪಿದಲ್ಲಿ ಅಂತಹ ವಾಹನಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೆಂದು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read