ಸುದೀಪ್ ಮನೆಗೇ ಹೋಗಿ ವಾಲ್ಮೀಕಿ ಜಾತ್ರೆಗೆ ಆಹ್ವಾನ

ದಾವಣಗೆರೆ: ವಾಲ್ಮೀಕಿ ಜಾತ್ರೆಗೆ ಆಯೋಜಕರಿಂದ ಆಹ್ವಾನವಿರಲಿಲ್ಲ ಎಂದು ನಟ ಸುದೀಪ್ ಹೇಳಿದ್ದು, ಅವರಿಗೆ ಆಹ್ವಾನ ನೀಡಿದ ಫೋಟೋಗಳು ವೈರಲ್ ಆಗಿವೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಆಗಮಿಸದ ಹಿನ್ನೆಲೆಯಲ್ಲಿ ಅವರನ್ನು ನೋಡಲು ಕಾತರಿಸುತ್ತಿದ್ದ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಕೊನೆಗೆ ಪ್ರಸನ್ನಾನಂದ ಸ್ವಾಮೀಜಿ, ಸುದೀಪ್ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಜನಹಳ್ಳಿಯಲ್ಲಿ ನಡೆದ ಘಟನೆ ಬಗ್ಗೆ ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಅತೀವ ಆಸೆ. ಮುಂದೆ ಖಂಡಿತ ಬರುತ್ತೇನೆ. ಪ್ರೀತಿ ಇರಲಿ, ಶಾಂತ ರೀತಿಯಿಂದ ವರ್ತಿಸಿ ಎಂದು ಸುದೀಪ್ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

ವಾಲ್ಮೀಕಿ ಜಾತ್ರೆಗೆ ಆಯೋಜಕರಿಂದ ಆಹ್ವಾನ ಇರಲಿಲ್ಲ ಎಂದು ಸುದೀಪ್ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಹೋಗಿ ಆಹ್ವಾನ ನೀಡಿದ ಫೋಟೋಗಳು ವೈರಲ್ ಆಗಿವೆ. ಸುದೀಪ್ ತಂದೆಯವರ ಕೈಗೆ ಆಹ್ವಾನ ಪತ್ರಿಕೆ ನೀಡಿದ ಫೋಟೋ ವೈರಲ್ ಆಗಿದೆ. ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಅವರು ಸುದೀಪ ಅವರ ನಿವಾಸಕ್ಕೆ ಹೋಗಿ ಆಹ್ವಾನ ನೀಡಿದ್ದಾರೆ. ಸುದೀಪ್ ಮನೆಯಲ್ಲಿ ಇರದ ಕಾರಣ ತಂದೆಗೆ ಆಹ್ವಾನ ಪತ್ರಿಕೆ ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read