ವಾಲ್ಮೀಕಿ ನಿಗಮ ಹಗರಣ: ಪ್ರಮುಖ ಆರೋಪಿ ಖರೀದಿಸಿಟ್ಟಿದ್ದ 10 ಕೆಜಿ ಚಿನ್ನ ಜಪ್ತಿ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ಹಗರಣದ ತನಿಖೆಯನ್ನು ಸಿಹಿಡಿ ಎಸ್ಐಟಿ ಚುರುಕುಗೊಳಿಸಿದೆ.

ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಅಕ್ರಮದ ಹಣದಲ್ಲಿ ಖರೀದಿಸಿಟ್ಟಿದ್ದ 10 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ನಿಗಮದ ಖಾತೆಯಿಂದ ಅಕ್ರಮವಾಗಿ ವರ್ಗಾಯಿಸಿಕೊಂಡ 94.70 ಕೋಟಿ ರೂಪಾಯಿಗಳಲ್ಲಿ ಸತ್ಯನಾರಾಯಣ ವರ್ಮಾ ಹೆಚ್ಚು ಪಾಲು ಪಡೆದುಕೊಂಡಿದ್ದ. ಈ ಹಣದಲ್ಲಿ ಸುಮಾರು 15 ಕೆಜಿ ಚಿನ್ನದ ಗಟ್ಟಿ ಖರೀದಿಸಿದ್ದ. ಆರೋಪಿ ಪ್ರಾಥಮಿಕ ವಿಚಾರಣೆ ವೇಳೆ ಚಿನ್ನ ಅಡಗಿಸಿಟ್ಟಿದ್ದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ನಿಟ್ಟಿನಲ್ಲಿ ಪ್ರತ್ಯೇಕ ತನಿಖಾ ತಂಡಗಳು ಹೈದರಾಬಾದ್ ಗೆ ತೆರಳಿ ಸತ್ಯನಾರಾಯಣನ ಕುಟುಂಬದವರು, ಆಪ್ತರು ಸೇರಿ ಹಲವು ಸಂಪರ್ಕಗಳನ್ನು ತಡಕಾಡಿದಾಗ ಚಿನ್ನದ ವಿಚಾರ ಬಯಲಾಗಿದೆ. 10 ಕೆಜಿ ಚಿನ್ನ ಜಪ್ತಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ಹೇಳಲಾಗಿದೆ.

ನಿಗಮದಿಂದ ದೋಚಿದ ಹಣದಲ್ಲಿಯೇ ನಾಲ್ಕು ಐಷಾರಾಮಿ ಫ್ಲಾಟ್ ಗಳನ್ನು ಸತ್ಯನಾರಾಯಣ ವರ್ಮಾ ಖರೀದಿಸಿರುವುದು ಗೊತ್ತಾಗಿದೆ. ನಿಜಾಮಾಬಾದ್ ನಲ್ಲಿ ಎರಡು ಹಾಗೂ ಹೈದರಾಬಾದ್ ಹೊರವಲಯದಲ್ಲಿ ಎರಡು ಪ್ಲಾಟ್ ಗಳನ್ನು ಖರೀದಿಸಿ ಅಡ್ವಾನ್ಸ್ ಹಣ ಕೊಟ್ಟಿದ್ದ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read