ವ್ಯಾಲಂಟೈನ್ಸ್ ಡೇ ದಿನ ಸಂಗಾತಿ ಜೊತೆ ಆಡಿ ಈ ಆಟ…… ಇಪ್ಪತ್ತು ಸೆಕೆಂಡ್ ನಲ್ಲಿ ಹಾರ್ಟ್ ಮತ್ತೆ ಮಾಡಿ

ಪ್ರೇಮಿಗಳ ದಿನದಂದು ಪ್ರೇಮಿಗಳು ಬ್ಯುಸಿಯಾಗಿರ್ತಾರೆ. ಮಾಡೋಕೆ ಸಾಕಷ್ಟು ಕೆಲಸ ಇರುತ್ತೆ. ಈ ಮಧ್ಯೆ ನೀವು ಕೆಲವೊಂದು ಗೇಮ್ಸ್‌ ಸೇರಿಸಿ ನಿಮ್ಮ ಖುಷಿಯನ್ನು ಡಬಲ್‌ ಮಾಡ್ಬಹುದು. ಅದರಲ್ಲಿ ಪಿಕ್ಚರ್‌ ಪಜಲ್‌ ಸೇರಿದೆ. ನೀವು ಕೆಲ ಪಿಕ್ಚರ್‌ ಪಜಲ್ ಆಡಬಹುದು. ಅದಕ್ಕೆ ಎರಡು ಫೋಟೋಗಳ ಅಗತ್ಯವಿರುತ್ತದೆ.

ಒಂದು ಫೋಟೋ ಪ್ರಶ್ನೆ ಕೇಳಲು. ಇನ್ನೊಂದು ಉತ್ತರ ನೀಡಲು. ಆತುರದಲ್ಲಿರುವಾಗ ಈ ಆಟ ಆಡೋದು ಒಳ್ಳೆಯದಲ್ಲ. ಇಬ್ಬರು ಆರಾಮವಾಗಿ ಕುಳಿತಾಗ ಇದನ್ನು ಆಡಬೇಕು. ಟೈಮರ್‌ ಸೆಟ್‌ ಮಾಡಿಕೊಳ್ಳಿ. ಸಂಗಾತಿ ನಿಮ್ಮ ಪ್ರಶ್ನೆಗೆ ಉತ್ತರ ಕಂಡು ಹಿಡಿದ್ರೆ ನೀವು ಅವರಿಗೆ ವಿಶೇಷ ಉಡುಗೊರೆ ಕೂಡ ನೀಡಬಹುದು. ಒಂದ್ವೇಳೆ ಸಂಗಾತಿಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದ್ರೆ ಅದನ್ನು ಅಲ್ಲಿಗೇ ಬಿಟ್ಬಿಡಿ. ಈ ಬಗ್ಗೆ ಹೆಚ್ಚು ಚರ್ಚೆ ಮಾಡ್ತಾ, ಅದು ಜಗಳಕ್ಕೆ ತಿರುಗೋದು ಬೇಡ. ವ್ಯಾಲಂಟೈನ್ಸ್‌ ಡೇ ಮೂಡ್‌ ಹಾಳು ಮಾಡಿಕೊಳ್ಳದೆ ನೀವು, ಸಿಕ್ಕ ಸ್ವಲ್ಪ ಸಮಯದಲ್ಲಿ ಈ ಪಿಕ್ಚರ್‌ ಫಜಲ್‌ ಆಡ್ಬಹುದು.

ಉದಾಹರಣೆಗೆ ನಮ್ಮಲ್ಲಿ ಎರಡು ಗುಲಾಬಿಗಳಿರುವ ಫೋಟೋಗಳಿವೆ. ನೀವು ಈ ಫೋಟೋದಲ್ಲಿ ಮೂರು ಹಾರ್ಟ್‌ ಪತ್ತೆ ಮಾಡ್ಬೇಕು. ನಿಮಗೆ ಇಪ್ಪತ್ತು ಸೆಕೆಂಡ್‌ ಕಾಲಾವಕಾಶವಿದೆ. ಒಂದ್ವೇಳೆ ಇಪ್ಪತ್ತು ಸೆಕೆಂಡ್‌ ನಲ್ಲಿ ಹಾರ್ಟ್‌ ಹುಡುಕೋಕೆ ಸಾಧ್ಯ ಆಗಿಲ್ಲ ಎಂದಾದ್ರೆ ಕೆಳಗಿನ ಫೋಟೋ ನೋಡಿ ಉತ್ತರ ಪತ್ತೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read