Watch: ನೀರಿನೊಳಗೆ ದೀರ್ಘ ಚುಂಬನ; 4 ನಿಮಿಷ ಕಿಸ್​ ಮಾಡಿ ದಾಖಲೆ ಬರೆದ ಜೋಡಿ

ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಗಿನ್ನೆಸ್ ವಿಶ್ವ ದಾಖಲೆ ಮಾಡಲು ನಿರ್ಧರಿಸಿದ್ದರು. ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಿ ದಾಖಲೆ ಮಾಡಲು ಅವರು ತೀರ್ಮಾನಿಸಿ ಈ ಹಿನ್ನೆಲೆಯಲ್ಲಿ ಅವರು 4 ನಿಮಿಷ ಮತ್ತು 6 ಸೆಕೆಂಡ್‌ಗಳ ಕಾಲ ನೀರೊಳಗಿನ ಸುದೀರ್ಘ ಚುಂಬನ ಮಾಡಿ ದಾಖಲೆ ಮಾಡಿದ್ದಾರೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಬೆತ್ ನೀಲ್ ಮತ್ತು ಮೈಲ್ಸ್ ಕ್ಲೌಟಿಯರ್ ಈ ದಾಖಲೆ ಮಾಡಿರುವುದಾಗಿ ಹೇಳಿದೆ. ಅಷ್ಟಕ್ಕೂ ಈ ದಾಖಲೆಯನ್ನು ಈ ಜೋಡಿ ಮಾಡಿರುವುದು ಇದೇ ಮೊದಲೇನಲ್ಲ. 13 ವರ್ಷಗಳ ಹಿಂದೆ ಇದೇ ಜೋಡಿ, ಇಟಾಲಿಯನ್ ಟಿವಿ ಶೋ ಲೋ ಶೋ ಡೀನಲ್ಲಿ ದಾಖಲೆ ಮಾಡಿತ್ತು. 3 ನಿಮಿಷ 24 ಸೆಕೆಂಡುಗಳ ಕಾಲ ನೀರಿನ ಅಡಿಯಲ್ಲಿ ಚುಂಬಿಸಲು ಅವರು ಸಮರ್ಥರಾಗಿದ್ದರು.

ಆರಂಭದಲ್ಲಿ ಇದಕ್ಕಾಗಿ ತಯಾರಿ ಮಾಡುವಾಗ ಇಬ್ಬರೂ ತುಂಬಾ ಕಷ್ಟಪಟ್ಟಿರುವುದಾಗಿ ಜೋಡಿ ಹೇಳಿಕೊಂಡಿದೆ. ಉಸಿರು ಹಿಡಿದಿಟ್ಟುಕೊಳ್ಳುವ ಅಭ್ಯಾಸಗಳನ್ನು ತೀವ್ರವಾಗಿ ನಡೆಸಿದೆವು. ಆರಂಭದಲ್ಲಿ ಕೆಲವು ಸೆಕೆಂಡ್​ಗಳು ಮಾತ್ರ ನೀರೊಳಗಿನ ಚುಂಬಿಸಲು ಸಾಧ್ಯವಾಗುತ್ತಿತ್ತು. ಹಲವು ದಿನಗಳ ಸತತ ಪರಿಶ್ರಮದಿಂದ ದಾಖಲೆ ಸ್ಥಾಪಿಸಿರುವುದಾಗಿ ಹೇಳಿದ್ದಾರೆ.

https://youtu.be/huL5b5XJgnc

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read