ಸೋನಭದ್ರಾ: ಅಪಘಾತದಲ್ಲಿ ತನ್ನ ಮಗ ಸಾವನ್ನಪ್ಪಿದ ಎಂಬ ಕಾರಣಕ್ಕೆ ಅಣ್ಣನ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಮಗನನ್ನೇ ಚಿಕ್ಕಪ್ಪ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಸೋನಾಭದ್ರಾದಲ್ಲಿ ನಡೆದಿದೆ.
ದುದ್ದಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರು ತಿಂಗಳ ಹಿಂದೆ ಆತನ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದ. ಅಂದು ಬೈಕ್ ಚಲಾಸುತ್ತಿದ್ದುದು ಅಣ್ಣನ ಮಗ ಜೀತ್ ಸಿಂಗ್ ಆಗಿದ್ದ. ಅಂದು ರಸ್ತೆ ಅಪಘಾತದಲ್ಲಿ ತನ್ನ ಮಗ ಸಾವನ್ನಪ್ಪಿದ್ದಕ್ಕೆ ಅಣ್ಣ ಹಾಗೂ ಅಣ್ಣನ ಮಗನ ಮೇಲೆ ಸೇಡು ತೀರಿಸುಕೊಳ್ಳಲು ಚಿಕ್ಕಪ್ಪ ಛತ್ತು ಸಿಂಗ್ ಹೊಂಚು ಹಾಕಿದ್ದ.
ಜೀತ್ ಸಿಂಗ್ ಮನೆ ಬಳಿ ಕುಳಿತಿದ್ದ ವೇಳೆ ಛತ್ತು ಸಿಂಗ್ ಕತ್ತಿಯಿಂದ ಜೀತ್ ಸಿಂಗ್ ಮೇಲೆ ದಾಳಿ ನಡೆಸಿದ್ದಾನೆ. ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಜೀತ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಎರಡೂ ಕುಟುಂಬಗಳ ನಡುವೆ ಆಸ್ತಿ ವಿವಾದದ ಜಗಳ, ಅಪಘಾತದಲ್ಲಿ ಮಗನ ಸಾವಿನಿಂದ ಕಂಗೆಟ್ಟಿದ್ದ ಛತ್ತು ಸಿಂಗ್ ಕೊನೆಗೆ ಅಣ್ಣನ ಮಗನನ್ನೇ ಬಲಿಪಡೆದಿದ್ದಾನೆ. ಕೊಲೆ ಬಳಿಕ ಛತ್ತು ಸಿಂಗ್ ನಾಪತ್ತೆಯಾಗಿದ್ದು, ಎಫ್ ಐಆರ್ ದಾಖಲಾಗಿದೆ.
ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುದ್ದು, ತನಿಖೆ ಮುಂದುವರೆದಿದೆ.