ಹೃದಯ ವಿದ್ರಾವಕ ಘಟನೆಯೊಂದರಲ್ಲಿ ಪುಟ್ಟ ಬಾಲಕ ತನ್ನ ಅಸ್ವಸ್ಥ ತಾಯಿಯನ್ನ ಗಾಲಿಕುರ್ಚಿಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ಪ್ರಸಂಗ ಉತ್ತರಾಖಂಡದಲ್ಲಿ ನಡೆದಿದೆ.
ರೂರ್ಕಿಯಿಂದ ಹೊರಹೊಮ್ಮಿರುವ ಹೃದಯ ವಿದ್ರಾವಕ ವಿಡಿಯೋದಲ್ಲಿ, ಜನನಿಬಿಡ ರಸ್ತೆಯ ಮಧ್ಯದಲ್ಲಿ 5 ವರ್ಷದ ಬಾಲಕ ತನ್ನ ಪ್ರಜ್ಞಾಹೀನ ತಾಯಿಯೊಂದಿಗೆ ಗಾಲಿಕುರ್ಚಿಯನ್ನು ತಳ್ಳುತ್ತಿರುವುದು ಕಂಡುಬಂದಿದೆ. ಈ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಪತ್ರಕರ್ತರು ಬಾಲಕನನ್ನು ವಿಚಾರಿಸಿದಾಗ, ತಾನು ಕಾಲ್ನಡಿಗೆಯಲ್ಲಿ ಪಿರಾನ್ ಕಲಿಯಾರ್ ಕಡೆಗೆ ಹೋಗುತ್ತಿದ್ದೆ ಎಂದು ಹೇಳಿದ್ದಾನೆ.
ವರದಿಯ ಪ್ರಕಾರ, ಪತ್ರಕರ್ತನು ತನ್ನ ವಕೀಲ ಸ್ನೇಹಿತನ ಸಹಾಯದಿಂದ ಮಹಿಳೆಯನ್ನುಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಮಹಿಳೆ ಅಪಾಯದಿಂದ ಪಾರಾಗುವವರೆಗೂ ಇದ್ದರು ಎಂಬುದು ತಿಳಿದುಬಂದಿದೆ. ವಿಚಾರಣೆ ವೇಳೆ ಬಾಲಕ ತನಗೆ ತಂದೆ ಇಲ್ಲ ಎಂದಿದ್ದು, ತನ್ನ ತಾಯಿಯೊಂದಿಗೆ ಜೀವನೋಪಾಯಕ್ಕಾಗಿ ಬೇಡಿಕೊಂಡಿದ್ದಾನೆ.
ಘಟನೆಯ ದಿನ ಇಬ್ಬರೂ ಭಿಕ್ಷಾಟನೆಗೆಂದು ಹೊರಟಿದ್ದಾಗ ಮಹಿಳೆ ಹಠಾತ್ತನೆ ಮೂರ್ಛೆ ಹೋಗಿದ್ದರಿಂದ ಆ ಪುಟ್ಟ ಬಾಲಕ ಆಕೆಯನ್ನು ಕಲಿಯಾರ್‌ನಲ್ಲಿರುವ ತಮ್ಮ ಗುಡಿಸಲಿಗೆ ಕರೆದುಕೊಂಡು ಹೋಗುತ್ತಿದ್ದ.
ವೈದ್ಯರ ಪ್ರಕಾರ, ಮಹಿಳೆಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡದಿದ್ದರೆ ಅವರು ಸಾವನ್ನಪ್ಪುತ್ತಿದ್ದರು ಎಂದು ಹೇಳಿದ್ದಾರೆ. ಪತ್ರಕರ್ತ ಮತ್ತು ವಕೀಲರ ಮಧ್ಯಪ್ರವೇಶದಿಂದ ಜೀವ ಉಳಿದಿದೆ.
https://twitter.com/Jogindermanani1/status/1628265866407325698?ref_src=twsrc%5Etfw%7Ctwcamp%5Etweetembed%7Ctwterm%5E1628265866407325698%7Ctwgr%5E2560de267ff3f6951f00e3c614d57b218b10cc3c%7Ctwcon%5Es1_&ref_url=https%3A%2F%2Fwww.freepressjournal.in%2Findia%2Futtarakhand-shocker-5-year-old-seen-pushing-wheelchair-with-unconscious-mother-home-in-roorkee