ಪ್ರತಿ ವರ್ಷ NCERT ಪಠ್ಯ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಪ್ರತಿ ವರ್ಷ NCERT ಪಠ್ಯ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಕಾಲಕಾಲಕ್ಕೆ ಪಠ್ಯ ಪುಸ್ತಕದಲ್ಲಿ ಬದಲಾವಣೆ ಅವಶ್ಯಕ ಎಂದು ಹೇಳಿದೆ.

ಶಿಕ್ಷಣದಲ್ಲಿ ನಿರಂತರ ಬದಲಾವಣೆ ಅಗತ್ಯವಿದ್ದು ಇದಕ್ಕಾಗಿ ಪ್ರತಿ ವರ್ಷ NCERT ಪಠ್ಯಪುಸ್ತಕ ಪರಿಷ್ಕರಿಸಿ ಹೊಸ ವಿಚಾರಗಳನ್ನು ಸೇರಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ಕೇಂದ್ರ ಶಿಕ್ಷಣ ಇಲಾಖೆ ಸಲಹೆ ನೀಡಿದೆ.

ಹಿಂದಿನಿಂದಲೂ NCERT ಪಠ್ಯಕ್ರಮದಲ್ಲಿ ಕಾಲಕಾಲಕ್ಕೆ ಪಠ್ಯ ಪರಿಷ್ಕರಣೆಯಂತಹ ಪದ್ಧತಿ ಇರಲಿಲ್ಲ. ಈಗ ಕಾಲ ವೇಗವಾಗಿ ಬದಲಾವಣೆ ಹೊಂದುತ್ತಿದ್ದು, ಪಠ್ಯಪುಸ್ತಕದಲ್ಲಿ ಬದಲಾವಣೆ ತರುವುದು ಅವಶ್ಯಕ ಎಂದು ಹೇಳಲಾಗಿದೆ. ಒಂದು ಸಲ ಮುದ್ರಿಸಿದ ಪುಸ್ತಕವನ್ನು ದೀರ್ಘ ಅವಧಿಗೆ ಇಟ್ಟುಕೊಳ್ಳುವುದು ಸೂಕ್ತವಲ್ಲ. ಪ್ರತಿ ವರ್ಷ ಪುಸ್ತಕ ಮುದ್ರಿಸುವ ಮುನ್ನ ಪರಿಶೀಲಿಸಬೇಕು. ಕೃತಕ ಬುದ್ಧಿಮತ್ತೆಯಂತಹ ವಿಷಯಗಳು ವಿಕಸನವಾಗಲು ನೆರವಾಗುತ್ತದೆ. ಹೀಗಾಗಿ ಪ್ರತಿ ವರ್ಷ ಪಠ್ಯ ಪರಿಷ್ಕರಿಸಿ ಬದಲಾವಣೆ ತರುವಂತೆ ಸಚಿವಾಲಯ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read