ಸೆಲ್ಫಿ ತೆಗೆದುಕೊಳ್ಳುವಾಗಲೇ ಅವಘಡ: ಬಂಡೆಯಿಂದ ಜಾರಿ ಬಿದ್ದು ವಿದ್ಯಾರ್ಥಿನಿ ಸಾವು

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರಾಖಂಡದ ಸಹಸ್ತ್ರಧಾರಾದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಬಂಡೆಯಿಂದ ಸ್ಪ್ರಿಂಗ್‌ ಗೆ ಬಿದ್ದು 20 ವರ್ಷದ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಸಹಸ್ತ್ರಧಾರಾ ಉತ್ತರಾಖಂಡದಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಬಾಲ್ಡಿ ನದಿಯ ದಡದಲ್ಲಿದೆ.

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸ್ವಾತಿ ಜೈನ್ ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಭಾನುವಾರ ಸ್ನೇಹಿತನೊಂದಿಗೆ ಸಹಸ್ತ್ರಧಾರಾಗೆ ಭೇಟಿ ನೀಡಿದ್ದರು. ನೀರಿನಲ್ಲಿ ಸ್ನಾನ ಮಾಡಿದ ನಂತರ ಅವಳು ಬಂಡೆಯೊಂದನ್ನು ಹತ್ತಿ ಸೆಲ್ಫಿ ತೆಗೆದುಕೊಳ್ಲುವಾಗ ಜಾರಿ ಬಿದ್ದಳು ಎಂದು ರಾಜ್‌ಪುರ ಎಸ್‌ಹೆಚ್‌ಒ ಜಿತೇಂದ್ರ ಚೌಹಾಣ್ ಹೇಳಿದ್ದಾರೆ.

ಭಾರೀ ಮಾನ್ಸೂನ್ ಮಳೆಯ ನಂತರ ಉಕ್ಕಿ ಹರಿಯುತ್ತಿದ್ದ ಪ್ರವಾಹದಿಂದ ಬಲಿಪಶು ಕೊಚ್ಚಿಕೊಂಡು ಹೋಗಿದ್ದಾಳೆ. ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ತಂಡವು ಸ್ಥಳಕ್ಕೆ ಧಾವಿಸಿತು. ಅವರು ಜಾರಿದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಅವರು ಆಕೆಯನ್ನು ಹೊರತೆಗೆದರು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಸ್ವಾತಿ ಜೈನ್ ಉತ್ತರ ಪ್ರದೇಶದ ಮುಜಾಫರ್ ನಗರದ ನಿವಾಸಿ ಪುನೀತ್ ಜೈನ್ ಅವರ ಪುತ್ರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read