ಕಾರವಾರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು 26 ಪ್ರವಾಸಿಗರನ್ನು ಬಲಿ ಪಡೆದ ಬಳಿಕ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆ ಧ್ವಂಸಗೊಳಿಸಿದ ಬಳಿಕ ಭರತ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಗಳನ್ನು ಕೈಗೊಂಡಿದೆ.
ಭಾರತದ ಇ-ಕಾಮರ್ಸ್ ಸಂಸ್ಥೆಗಳಿಗೆ ಪಾಕ್ ಧ್ವಜ, ಸರಕು ಮರಾಟ್ ನಿಲ್ಲಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಪಾಕಿಸ್ತಾನಕ್ಕೆ ಯಾವುದೇ ವಸ್ತುಗಳನ್ನು ರಫ್ತಿಗೂ ನಿರ್ಬಂಧ ಹೇರಿದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ರೈತರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಉತ್ತರ ಕನ್ನಡದ ಹೊನ್ನಾವರದಿಂದ ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ವೀಳ್ಯದೆಲೆಗಳ ರಫ್ತನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಪಾಕಿಸ್ತಾನಕ್ಕೆ ರಸ್ತಾಗುತ್ತಿದ್ದ ವೀಲ್ಯದೆಲೆ ಹಾಗೂ ವೀಳ್ಯದೆಲೆ ಉತ್ಪನ್ನಗಳಿಗೆ ಶಾಶ್ವತವಾಗಿ ನಿರ್ಬಂಧ ಹೇರಲು ನಿರ್ಧರಿಸಿದೆ.
ಜಿಲ್ಲೆಯ ಹೊನ್ನವರ ತಾಲೂಕಿನ ಶರಾವತಿ ನದಿ ಪಾತ್ರದ ರೈತರಿಂದ ದೆಹಲಿ ವರ್ತಕರು ವೀಳ್ಯದೆಲೆ ಖರೀದಿಸಿ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು. ಆದರೀಗ ನಮಗೆ ನಷ್ಟವಾದರೂ ಪರವಾಗಿಲ್ಲ ಪಾಕಿಸ್ತಾನಕ್ಕೆ ವೀಲ್ಯದೆಲೆ ಕಳುಹಿಸುವುದಿಲ್ಲ ಎಂದು ದೃಢ ನಿರ್ಧರ ಮಾಡಿದ್ದಾರೆ.