ವರದಕ್ಷಿಣೆಗಾಗಿ ಮಹಿಳೆ ಮೇಲೆ ಕೊಡಲಿಯಿಂದ ಹಲ್ಲೆ: ವಿಡಿಯೋ ಮಾಡುತ್ತಿದ್ದ ನೆರೆಹೊರೆಯವರು

ಘಾಜಿಯಾಬಾದ್: ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬಳ ಮೇಲೆ ಆಕೆಯ ಕುಟುಂಬಸ್ಥರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ.

ಇದನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಹಲ್ಲೆಯು ಮಹಿಳೆಯ ಮೇಲೆ ಆಕೆಯ ಅತ್ತೆಯ ಮೇಲೆ ಮಾಡಿದ ಭಯಾನಕ ದೌರ್ಜನ್ಯವನ್ನು ಬಹಿರಂಗಪಡಿಸುತ್ತದೆ.

ವೈರಲ್ ವಿಡಿಯೋದಲ್ಲಿ, ಮಹಿಳೆಯನ್ನು ಆಕೆಯ ಅತ್ತೆಯರು ಬಲವಂತವಾಗಿ ತನ್ನ ಮನೆಯಿಂದ ಹೊರಗೆಳೆದು ಪದೇ ಪದೇ ಕೊಡಲಿಯಿಂದ ಹಲ್ಲೆ ನಡೆಸುವುದನ್ನು ನೋಡಬಹುದು. ಆಘಾತಕಾರಿ ಸಂಗತಿ ಎಂದರೆ ನೆರೆಹೊರೆಯರು ಇದನ್ನು ನೋಡುತ್ತಿದ್ದರೇ ವಿನಾ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಹಗಲು ಹೊತ್ತಿನಲ್ಲಿ ದಾಳಿ ಸಂಭವಿಸಿದೆ.

ಮಹಿಳೆ ನೋವಿನಿಂದ ಕಿರುಚಾಡುವುದನ್ನು ನೋಡಬಹುದು. ತಪ್ಪಿಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

https://twitter.com/azizkavish/status/1664514686304550912?ref_src=twsrc%5Etfw%7Ctwcamp%5Etweetembed%7Ctwterm%5E16

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read