ಪೊಲೀಸ್ ಠಾಣೆಯೊಳಗೆ ಗಣಿಗಾರಿಕೆ ಮಾಫಿಯಾದ 2 ಗುಂಪುಗಳ ಹೊಡೆದಾಟ; 10 ಜನರ ವಿರುದ್ಧ ಬಿತ್ತು ಕೇಸ್

ಗಣಿಗಾರಿಕೆ ಮಾಫಿಯಾದ ಎರಡು ಗುಂಪುಗಳು ಪೊಲೀಸ್ ಠಾಣೆಯಲ್ಲಿ ಹೊಡೆದಾಡಿಕೊಂಡ ಪ್ರಕರಣ ಸಂಬಂಧ ಒಟ್ಟು 10 ಜನರ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಗುಂಪು ಮೈನ್‌ಪುರಿಯಲ್ಲಿ ಪೊಲೀಸ್ ಠಾಣೆಯೊಳಗೆ ಹೊಡೆದಾಟ ನಡೆಸಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಘಟನೆಯ ವೀಡಿಯೊದಲ್ಲಿ ಪ್ರತಿಸ್ಪರ್ಧಿ ಗುಂಪುಗಳ ಸದಸ್ಯರು ಪೊಲೀಸ್ ಠಾಣೆಯೊಳಗೆ ಪರಸ್ಪರ ಹಲ್ಲೆ ನಡೆಸುತ್ತಿರುವುದನ್ನು ತೋರಿಸಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿದರು.

ಪೊಲೀಸರ ಪ್ರಕಾರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಿಗದಿತ ಭೇಟಿಯ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವಿಐಪಿ ಡ್ಯೂಟಿಗೆ ವರದಿ ಮಾಡಲು ಹೋಗುತ್ತಿದ್ದರು. ಈ ವೇಳೆ ಮಾರ್ಗದಲ್ಲಿ ಇಬ್ಬರು ಟ್ರಾಕ್ಟರ್ ಚಾಲಕರು ಜಗಳವಾಡುವುದನ್ನು ಕಂಡರು.ಗಲಾಟೆಯಲ್ಲಿ ತೊಡಗಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಆದರೆ ಅವರು ಠಾಣೆಯಲ್ಲೂ ಜಗಳ ಮುಂದುವರಿಸಿದ್ದರು.
ಇದರ ನಂತರ ಠಾಣೆಯಲ್ಲಿ ಗಲಾಟೆಯಲ್ಲಿ ತೊಡಗಿದ್ದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read