ಲಕ್ಷ್ಮಿ ಹೆಬ್ಬಾಳ್ಕರ್ -ಸಿ.ಟಿ. ರವಿ ಪ್ರಕರಣ: ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ

ಮೈಸೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿಗಳ ನಿಲುವಿಗೆ ನಾನು ಬದ್ಧವಾಗಿರುತ್ತೇನೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಭಾಗವಹಿಸಿದ್ದ ಯು.ಟಿ. ಖಾದರ್, ಬೆಳಗಾವಿಯಲ್ಲಿ ಇತ್ತೀಚೆಗೆ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನ ಪರಿಷತ್ ಸಭಾಪತಿಯವರ ನಿಲುವಿಗೆ ನಾನು ಬದ್ಧವಾಗಿರುತ್ತೇನೆ. ಈ ಕುರಿತಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದಕ್ಕಾಗಿ ಸಭಾಪತಿಗಳು ಇದ್ದಾರೆ. ಸಮರ್ಥರಾಗಿರುವ ಸಭಾಪತಿಗಳೇ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ವಿಷಯ ಆಧಾರಿತ ಚರ್ಚೆಗಳಿಗೆ ಸದನದಲ್ಲಿ ಮಾಧ್ಯಮದವರು ಆದ್ಯತೆ ನೀಡಬೇಕು ಯಾವುದೋ ಹೇಳಿಕೆಗಳನ್ನೇ ಹೈಲೈಟ್ ಮಾಡಿದರೆ ಶಾಸಕರು ಅಂತವುಗಳಿಗೆ ಹೆಚ್ಚು ಗಮನ ನೀಡುತ್ತಾರೆ. ನಾನು ಸ್ಪೀಕರ್ ಆಗಿ ಸಂತುಷ್ಟನಾಗಿದ್ದೇನೆ. ಯಾವುದೇ ಕೆಲಸ ಸಿಕ್ಕರೂ ಖುಷಿಯಿಂದ ಮಾಡಿದ್ದೇನೆ. ಈಗಲೂ ಅದೇ ರೀತಿ ಕೆಲಸ ಮಾಡುತ್ತಿದ್ದೇನೆ. ಮಂತ್ರಿ ಸ್ಥಾನ ಯಾವಾಗ ಬೇಕಾದರೂ ಸಿಗಬಹುದು. ಸ್ಪೀಕರ್ ಹುದ್ದೆ ಸಿಗುವುದು ಕಷ್ಟ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read