BIG NEWS: ಖ್ಯಾತ ಗಾಯಕಿ ಉಷಾ ಉತ್ತಪ್ ಪತಿ ವಿಧಿವಶ

ಖ್ಯಾತ ಗಾಯಕಿ ಉಷಾ ಉತ್ತಪ್ ಅವರ ಪತಿ ಜನಿ ಚಾಕೋ ಉತ್ತಪ್ ವಿಧಿವಶರಾಗಿದ್ದಾರೆ. 78 ವರ್ಷದ ಅವರು ಕಳೆದ ರಾತ್ರಿ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ಟಿವಿ ವೀಕ್ಷಿಸುತ್ತಿರುವಾಗಲೇ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

ಜನಿ ಚಾಕೋ ಉಷಾ ಉತ್ತಪ್ ಅವರ ಎರಡನೇ ಪತಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಟೀ ಪ್ಲಾಂಟೇಶನ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದ ಅವರು. ಪತ್ನಿ ಉಷಾ ಉತ್ತಪ್, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.

ತಮ್ಮ ಅದ್ಭುತ ಕಂಠಸಿರಿಯಿಂದಲೇ ಖ್ಯಾತರಾಗಿದ್ದ ಉಷಾ ಉತ್ತಪ್ ಚಿತ್ರರಂಗದಲ್ಲೂ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಉಷಾ ಉತ್ತಪ್ ಅವರಿಗೆ ಇತ್ತೀಚೆಗಷ್ಟೇ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಪದ್ಮಭೂಷಣ’ ಲಭಿಸಿದ್ದು, ಪತಿ ಜನಿ ಚಾಕೋ ಪತ್ನಿಗೆ ಲಭಿಸಿದ ಈ ಪ್ರಶಸ್ತಿಯಿಂದ ಸಂತಸಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read