ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸಿ ಟೊಮೆಟೊ ಫೇಸ್‌ ಪ್ಯಾಕ್

ಟೊಮೆಟೊವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ಬಗೆಯ ಪೌಷ್ಟಿಕಾಂಶವಿದೆ. ಇದು ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯಕ್ಕೂ ಬಹಳ ಸಹಕಾರಿಯಾಗಿದೆ. ಹಾಗಾಗಿ ಟೊಮೆಟೊ ಬಳಸಿ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳಿ.

*ಟೊಮೆಟೊ ಹಾಗೂ ಪುದೀನ ಮಿಶ್ರಣವು ಚರ್ಮವನ್ನು ಕಲೆ ರಹಿತವಾಗಿ ಮಾಡುತ್ತದೆ. ಹಾಗಾಗಿ 1 ಚಮಚ ಪುದೀನಾ ಪೇಸ್ಟ್ ಗೆ 2 ಚಮಚ ಟೊಮೆಟೊ ಪೇಸ್ಟ್ ನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡುತ್ತಾ ಬಂದರೆ ಕಲೆರಹಿತ ತ್ವಚೆ ನಿಮ್ಮದಾಗುತ್ತದೆ.

*ಹಾಗೇ ಸ್ಕಿನ್ ಟ್ಯಾನ್ ತೆಗೆದು ಹಾಕಲು ಟೊಮೆಟೊ ಸಹಕಾರಿ. ಬಿಸಿಲಿನಿಂದ ಮುಖದ ಚರ್ಮ ಕಂದು ಬಣ್ಣಕ್ಕೆ ತಿರುಗಿದ್ದರೆ ಟೊಮೆಟೊ ಫೇಸ್ ಪ್ಯಾಕ್ ಬಳಸಿ. 1 ಚಮಚ ಟೊಮೆಟೊ ತಿರುಳಿಗೆ 1 ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಸನ್ ಟ್ಯಾನ್ ರಿಮೂವ್ ಆಗಿ ಮುಖದ ಕಾಂತಿ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read