ಎಣ್ಣೆಯುಕ್ತ ಕೂದಲಿಗೆ ಬಳಸಿ ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಕಂಡೀಷನರ್

ಎಣ್ಣೆಯುಕ್ತ ಕೂದಲಿನ ಸಮಸ್ಯೆ ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಇದರಿಂದ ಕೂದಲಿನಲ್ಲಿ, ಕೊಳಕು, ಧೂಳು ಸೇರಿಕೊಂಡು ಕೂದಲಿಗೆ ಹಾನಿಯನ್ನುಂಟುಮಾಡುತ್ತದೆ. ಇಂತಹ ಕೂದಲನ್ನು ಆರೈಕೆ ಮಾಡಲು ಮನೆಯಲ್ಲಿಯೇ ತಯಾರಿಸಬಹುದಾದ ಈ ಹೇರ್ ಕಂಡೀಷನರ್ ಬಳಸಿ.

*ಬಾಳೆಹಣ್ಣು ಖನಿಜಾಂಶ ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ಇದು ನೆತ್ತಿಯ ಚರ್ಮದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಎಣ್ಣೆಯಂಶವನ್ನು ನಿವಾರಿಸುತ್ತದೆ. ಜೇನುತುಪ್ಪ, ನೆತ್ತಿಯಲ್ಲಿ ಉಂಟಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. 1 ಬಾಳೆಹಣ್ಣನ್ನು ಕಿವುಚಿ ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಇದನ್ನು ವಾರಕ್ಕೊಮ್ಮೆ ಪ್ರಯತ್ನಿಸಿ.

*ಅಲೋವೆರಾ, ಕೂದಲನ್ನು ಮಾಲಿನ್ಯದಿಂದ ಕಾಪಾಡುತ್ತದೆ. ಆಲಿವ್ ಆಯಿಲ್ ನೆತ್ತಿಯ ತೈಲ ಮಟ್ಟವನ್ನು ಸಮತೋಲನಗೊಳಿಸುತ್ತದೆ. 1 ಚಮಚ ಅಲೋವೆರಾ ಜೆಲ್ ಗೆ 1 ಚಮಚ ಆಲಿವ್ ಆಲಿವ್ ಆಯಿಲ್ ನ್ನು ಮಿಕ್ಸ್ ಮಾಡಿ ಕೂದಲಿನ ಹಚ್ಚಿ ರಾತ್ರಿಯಿಡಿ ಬಿಟ್ಟು ಮರುದಿನ ಬೆಳಿಗ್ಗೆ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಪ್ರಯತ್ನಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read