ಆಯಿಲ್‌ ಮುಕ್ತ ತ್ವಚೆಗಾಗಿ ಬಳಸಿ ಈ ಫೇಸ್‌ ಪ್ಯಾಕ್

ಎಣ್ಣೆಯುಕ್ತ ಚರ್ಮ ಹೊಂದಿರುವವರು ಚರ್ಮದ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಇವರ ಚರ್ಮದ ಮೇಲೆ ಎಣ್ಣೆಯಂಶವಿರುವುದರಿಂದ ವಾತಾವರಣದ ಮಾಲಿನ್ಯಗಳು ನಿಮ್ಮ ಚರ್ಮದ ಮೇಲೆ ಶೇಖರಣೆಯಾಗುತ್ತದೆ. ಇದರಿಂದ ಅವರು ಹಲವು ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಇವರು ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಈ ಫೇಸ್ ಪ್ಯಾಕ್ ಗಳನ್ನು ಬಳಸಿ.

1 ಚಮಚ ಕಿತ್ತಳೆ ಸಿಪ್ಪೆ ಪುಡಿಗೆ 1ಚಮಚ ನಿಂಬೆ ಸಿಪ್ಪೆ ಪುಡಿ, ½ ಚಮಚ ಕಾಫಿ ಪುಡಿ, 1 ಚಿಟಿಕೆ ಅಡುಗೆ ಸೋಡಾ ಸೇ‌ರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 12 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಅದನ್ನು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಅಥವಾ 2 ಬಾರಿ ಮಾಡಿ.

ಅರಶಿನವು ಚರ್ಮದಲ್ಲಿರುವ ಕಲ್ಮಶಗಳನ್ನು ಹೊರಗೆಳೆದು ಚರ್ಮವನ್ನು ಆರೋಗ್ಯವಾಗಿಡುತ್ತದೆ. ಹಾಗಾಗಿ 1 ಚಮಚ ಅರಶಿನಕ್ಕೆ 1 ಚಮಚ ಗೋಡಂಬಿ ಪೇಸ್ಟ್, 1 ಚಮಚ ಕೆನೆಯನ್ನು ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ. 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಅಥವಾ 2 ಬಾರಿ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read