ದೀಪಾವಳಿಯಂದು ಮನೆಯ ಅಲಂಕಾರಕ್ಕೆ ಈ 5 ವಸ್ತುಗಳನ್ನು ಬಳಸಿ, ದುಪ್ಪಟ್ಟಾಗುತ್ತದೆ ಹಬ್ಬದ ಸಂಭ್ರಮ…..!

 

ಹಬ್ಬದ ಸೀಸನ್ ನಡೆಯುತ್ತಿದೆ. ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿ ಇನ್ನೇನು ಬಂದೇಬಿಡ್ತು. ದೀಪಾವಳಿ ಸಮಯದಲ್ಲಿ ಎಲ್ಲರೂ ಮನೆಯನ್ನು ಶುಚಿಗೊಳಿಸ್ತಾರೆ. ಹಬ್ಬಕ್ಕೆ ಮನೆಯನ್ನು ವಿಶೇಷವಾಗಿ ಅಲಂಕರಿಸುತ್ತಾರೆ. ಆದ್ರೆ ಯಾವ ರೀತಿ ಅಲಂಕಾರ ಮಾಡಬೇಕು ಅನ್ನೋದು ಹಲವರ ಸಮಸ್ಯೆ.

ಹಬ್ಬ ಸಮೀಪಿಸುತ್ತಿದ್ದಂತೆ ಮನೆಯನ್ನು ಹೇಗೆ ಅಲಂಕರಿಸಬೇಕೆಂದು ನಮಗೆ ಅರ್ಥವಾಗುವುದಿಲ್ಲ. ದೀಪಾವಳಿಯಂದು ಮನೆಯನ್ನು ಹೇಗೆ ಸರಳವಾಗಿ ಅಲಂಕರಿಸಬಹುದು ಎಂಬುದನ್ನು ನೋಡೋಣ.

ರಂಗೋಲಿ – ರಂಗೋಲಿ ಇಲ್ಲದೆ ದೀಪಾವಳಿ ಅಪೂರ್ಣ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ಈ ದೀಪಾವಳಿಯಲ್ಲಿ ಮನೆಯಂಗಳದಲ್ಲಿ ಸುಂದರ ರಂಗೋಲಿ ಹಾಕಿ. ರಂಗೋಲಿಯಿಂದ ಮನೆಗೆ ಹೊಸ ಲುಕ್‌ ಬರುತ್ತದೆ. ಅದರ ಸೌಂದರ್ಯವನ್ನು ಹೆಚ್ಚಿಸಲು ಹೂವುಗಳನ್ನು ಸಹ ಬಳಸಬಹುದು.

ಬೆಳಕಿನ ಅಲಂಕಾರ – ದೀಪಾವಳಿ ಅಲಂಕಾರಕ್ಕಾಗಿ ಟೀ ಲೈಟ್ ಹೋಲ್ಡರ್‌ಗಳು ಮತ್ತು ಲ್ಯಾಂಟರ್ನ್‌ಗಳನ್ನು ಸಹ ಬಳಸಬಹುದು. ಇವು ಕೂಡ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತವೆ.

ಇಂಡೋರ್‌ ಪ್ಲಾಂಟ್‌ – ಮನೆಯನ್ನು ಅಲಂಕರಿಸಲು ಇಂಡೋರ್‌ ಸಸ್ಯಗಳನ್ನು ಸಹ ಬಳಸಬಹುದು. ಇವು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ.

ಹೂವು – ದೀಪಾವಳಿ ಅಲಂಕಾರಕ್ಕೆ ಹೂವು ಇರಲೇಬೇಕು. ಹೂವುಗಳಿಂದ ಅಲಂಕರಿಸುವುದರಿಂದ ಮನೆ ಸುಂದರವಾಗಿ ಕಾಣುತ್ತದೆ. ಮನೆಯ ಪರದೆಗಳು ಮತ್ತು ಬಾಗಿಲುಗಳ ಮೇಲೆ ಹೂಮಾಲೆಗಳನ್ನು ಇಳಿಬಿಡಬಹುದು.

ಮೇಣದಬತ್ತಿ – ಮೇಣದಬತ್ತಿಗಳು ಮತ್ತು ದೀಪಗಳು ಮನೆಯನ್ನು ಬೆಳಗುತ್ತವೆ. ಜೊತೆಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಮನೆಯ ಪ್ರತಿಯೊಂದು ಮೂಲೆಯನ್ನೂ ದೀಪ ಮತ್ತು  ಮೇಣದಬತ್ತಿಗಳಿಂದ ಅಲಂಕರಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read