ಟೀ ಬ್ಯಾಗ್ ಎಸೆಯದೆ ಸೌಂದರ್ಯವರ್ಧಕವಾಗಿ ಬಳಸಿ…!

ಬೆಳಗೆದ್ದು ಗ್ರೀನ್ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಕುಡಿದಾದ ಆ ಟೀ ಸ್ಯಾಚೆಟ್ ಅನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಹೀಗೆ ಬಳಸಬಹುದು.

ಚಹಾದ ಈ ತ್ಯಾಜ್ಯಕ್ಕೆ ಆಂಟಿ ಏಜಿಂಗ್ ಗುಣವಿದ್ದು ಇದನ್ನು ತ್ವಚೆಗೆ ಬಳಸಿದಲ್ಲಿ ನಿಮ್ಮ ವಯಸ್ಸನ್ನು ಮತ್ತಷ್ಟು ಕಿರಿದಾಗಿಸಬಹುದು. ಮೊಡವೆ ಬರದಂತೆ ತಡೆಯಬಹುದು. ಸೌಂದರ್ಯವರ್ಧಕವಾಗಿ ಇದನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.

ಕಣ್ಣುಗಳ ಬುಡ ಊದಿದ್ದರೆ ಬಳಸಿದ ಟೀ ಬ್ಯಾಗ್ ಅರ್ಧ ಗಂಟೆ ಹೊತ್ತು ಫ್ರೀಜರ್ ನಲ್ಲಿಟ್ಟು ಬಳಿಕ ಕಣ್ಣಿನ ಊತ ಇರುವಲ್ಲಿಗೆ ಇಟ್ಟುಕೊಂಡು ಐದು ನಿಮಿಷ ಕಣ್ಣು ಮುಚ್ಚಿ ಮಲಗಿ. ಇದು ಊತವನ್ನು ಹೋಗಲಾಡಿಸುತ್ತದೆ ಮಾತ್ರವಲ್ಲ ಕಣ್ಣಿನ ಕೆಳಗೆ ಕಪ್ಪಾಗಿದ್ದರೆ ಅದನ್ನೂ ಸರಿ ಮಾಡುತ್ತದೆ.

ಟೀ ಬ್ಯಾಗ್ ಒಳಗಿರುವ ಎಲೆಗಳು ಸ್ಕ್ರಬ್ ‌ ರೀತಿಯೂ ಕೆಲಸ ಮಾಡುತ್ತವೆ. ಮುಖಕ್ಕೆ ಹೊಳಪು ತಂದುಕೊಡುತ್ತವೆ. ಟೀ ಎಲೆಗಳು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಮೊಡವೆಗಳನ್ನು ದೂರ ಮಾಡುತ್ತವೆ. ಮಾತ್ರವಲ್ಲ ಕಲೆಗಳನ್ನೂ ದೂರ ಮಾಡುತ್ತವೆ.

ಟೀ ಮಾಡಿದ ಬಳಿಕ ಅದರ ಬ್ಯಾಗನ್ನು ತುಟಿಯ ಮೇಲೆ ಇಟ್ಟುಕೊಂಡರೆ ತುಟಿ ಒಡೆಯುವ, ಬಿರಿಯುವ ಸಮಸ್ಯೆ ದೂರವಾಗುತ್ತದೆ. ಸನ್ ಬರ್ನ್ ಆಗಿದ್ದರೆ ಅದನ್ನು ದೂರ ಮಾಡಲೂ ಈ ಬ್ಯಾಗನ್ನು ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read