BIG NEWS : ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ತಪ್ಪಿದರೆ 1000 ರೂ.ದಂಡ.!

ಹಾಸನ : ಜಿಲ್ಲೆಯಲ್ಲಿರುವ ಎಲ್ಲಾ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಬರುವ ಎಲ್ಲಾ ವರ್ಗದ ಅಧಿಸೂಚಿತ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ನಿರ್ಬಂಧಿಸುವ ಹಾಗೂ ಸ್ವಚ್ಚತೆಗೆ ಸಂಬಂಧಿಸಿದಂತೆ ಈ ಕೆಳಕಂಡ ನಿರ್ದೇಶನಗಳನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗದಂತೆ ಕಟ್ಟು-ನಿಟ್ಟಾಗಿ ಕ್ರಮವಹಿಸುವುದು. ದೇವಾಲಯಕ್ಕೆ ಸೇರಿದ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಿ ಬಟ್ಟೆಯ ಕೈ ಚೀಲಗಳನ್ನು ಬಳಸುವುದನ್ನು ಕಡ್ಡಾಯಗೊಳಿಸುವುದು. ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಕಸವನ್ನು ಎಸೆದಲ್ಲಿ ಅಥವಾ ತ್ಯಾಜ್ಯವನ್ನು ಹಾಕಿದಲ್ಲಿ ಸಂಬಂಧಪಟ್ಟವರಿಗೆ ಕಡ್ಡಾಯವಾಗಿ ರೂ.1000(ಒಂದು ಸಾವಿರ) ದಂಡವನ್ನು ವಿಧಿಸಿ ಸಂಗ್ರಹವಾದ ಮೊತ್ತವನ್ನು ದೇವಾಲಯದ ನಿಧಿಗೆ ಜಮಾ ಮಾಡುವ ಬಗ್ಗೆ ಕ್ರಮವಹಿಸುವುದು.

ದೇವಸ್ಥಾನದ ಸುತ್ತ-ಮುತ್ತಲಿನ ಪರಿಸರ ಬಗ್ಗೆ ಹೆಚ್ಚಿನ ಗಮನ ಹರಿಸಿ ಶುಚಿತ್ವವನ್ನು ಕಾಪಾಡುವುದು. ದೇವಾಲಯದ ಮುಖ್ಯ ದ್ವಾರಗಳಲ್ಲಿಯೇ ಭಕ್ತಾಧಿಗಳು/ಸಾರ್ವಜನಿಕರಿಗೆ ಗೋಚರಿಸುವಂತೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಲಾಗಿದೆ ಎಂಬ ಸೂಚನಾ ಫಲಕವನ್ನು ಅಳವಡಿಸುವುದು. ದೇವಸ್ಥಾನದಲ್ಲಿ ಪ್ರಸಾದ ವಿತರಿಸಲು ಯಾವುದೇ ರೀತಿಯ ಪ್ಲಾಸ್ಟಿಕ್ ಅನ್ನು ಬಳಸದೇ ನೈಸರ್ಗಿಕವಾಗಿ ಸಿಗುವಂತಹ ಅಡಿಕೆ ತಟ್ಟೆ, ಬಾಳೆ ಎಲೆ, ಹಾಗೂ ದೊನ್ನೆಯನ್ನು ಬಳಸತಕ್ಕದ್ದು. ದೇವಾಲಯಗಳಲ್ಲಿ ಯಾವುದೇ ತರಹದ ಪ್ಲಾಸ್ಟಿಕ್ನಿಂದ ತಯಾರಿಸಿದ ಅಲಂಕಾರಿಕ ಹೂವು, ತೋರಣ ಹಾಗೂ ಇತರೆ ವಸ್ತುಗಳನ್ನು ಬಳದಂತೆ ಜಾಗ್ರತೆವಹಿಸುವುದು.ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ಮತ್ತು ಘೋಷಿತ ದೇವಾಲಯ, ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನಿಷೇದಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಭಂದಿಸಿ ಶುಚಿತ್ವವನ್ನು ಕಾಪಾಡಲು ಕ್ರಮವಹಿಸಬೇಕು ಇದನ್ನು ಪಾಲನೆ ಮಾಡದಿದ್ದಲ್ಲಿ ಸಂಬಂಧಪಟ್ಟ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು/ಸಂಬಂಧಪಟ್ಟ ಅಧಿಕಾರಿ/ಮಂಡಳಿಯನ್ನು ನೇರ ಹೊಣೆಗಾರರನ್ನಾಗಿ ಮಾಡುವುದಲ್ಲದೆ, ಸದರಿಯವರ ನಿರ್ಲಕ್ಷತೆಯ ಕುರಿತು ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಅವರು ಆದೇಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read