BIG NEWS : ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ‘ರಾಷ್ಟ್ರಧ್ವಜ’ ಬಳಕೆ ; ‘ರಾಜ್ಯ ಸರ್ಕಾರ’ ಮಹತ್ವದ ಆದೇಶ..!

ಬೆಂಗಳೂರು : ರಾಜ್ಯದಲ್ಲಿ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಬಳಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಷ್ಟ್ರಧ್ವಜ ಬಳಕೆ ಬಗ್ಗೆ ಧ್ವಜ ಸಂಹಿತೆ, 2002 ಅನ್ನು ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ಹೊರಡಿಸಿದೆ. ಈ ಧ್ವಜ ಸಂಹಿತೆಯ ಸೆಕ್ಷನ್ IX ರ ಕಂಡಿಕೆ ಸಂ. 3.44 ಮತ್ತು 3.45 ಅನ್ನು ಕೆಳಗೆ ಉದ್ಧರಿಸಲಾಗಿದೆ.

ಮೇಲಿನ ಕಂಡಿಕೆ 3.44ರಲ್ಲಿ ನಿರ್ದಿಷ್ಟಪಡಿಸಿರುವ ರಾಜ್ಯದ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಅಳವಡಿಸುವಾಗ ಧ್ವಜ ಸಂಹಿತೆ, 2002ರ ಇತರ ಎಲ್ಲಾ ಉಪಬಂಧಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಕ್ತ ಕ್ರಮ ವಹಿಸುವಂತೆ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಬರುವ ಸಂಬಂಧಪಟ್ಟವರಿಗೆ ಸೂಚನೆಗಳನ್ನು ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read