ʼಆರೋಗ್ಯʼಕರ ಜೀವನಕ್ಕೆ ಪ್ರತಿದಿನ ಬಳಸಿ ನಿಂಬೆ

ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ.

ದಿನನಿತ್ಯ ನಿಂಬೆ ರಸವನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ. ರಕ್ತವನ್ನು ಇದು ಶುದ್ಧೀಕರಿಸುತ್ತದೆ. ದೇಹಕ್ಕೆ ತಂಪು ನೀಡುತ್ತದೆ, ಆ್ಯಂಟಿ ಸೆಪ್ಟಿಕ್ ಗುಣ ಹೊಂದಿದೆಯಲ್ಲದೇ ಆಯಾಸ ಪರಿಹಾರಕ್ಕೆ ನಿಂಬೆ ರಸ ರಾಮಬಾಣ. ಕೊಬ್ಬಿನಂಶ ಕಡಿಮೆ ಮಾಡುತ್ತದೆ.

ಜೀರ್ಣ ಶಕ್ತಿಗೆ ಸಹಕಾರಿ ಹೀಗೆ ಹತ್ತು ಹಲವು ಪ್ರಯೋಜನಗಳು ನಿಂಬೆ ಉಪಯೋಗಿಸುವುದರಿಂದ ಲಭಿಸುತ್ತದೆ.

ಉತ್ತಮ ಆರೋಗ್ಯಕ್ಕಷ್ಟೇ ಅಲ್ಲದೇ ಸೌಂದರ್ಯವರ್ಧಕವಾಗಿಯೂ ನಿಂಬೆ ತುಂಬಾ ಪರಿಣಾಮಕಾರಿ. ನಿಂಬೆ ರಸದೊಂದಿಗೆ ಚಿಟಕಿ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಹಲ್ಲು, ವಸಡು ಗಟ್ಟಿಯಾಗಿ ಹಲ್ಲು ಹೊಳೆಯುತ್ತವೆ. ಕೂದಲು ಉದುರುವ ಸಮಸ್ಯೆಗೂ ನಿಂಬೆ ಬಳಸಿ ಲಾಭ ಪಡೆಯಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read