ಮುಖ ಮೃದುವಾಗಿಸಲು ಬಳಸಿ ಚಾಕೋಲೆಟ್ ಫೇಸ್‌ ಪ್ಯಾಕ್‌

ಚಾಕಲೇಟ್ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಚಾಕಲೇಟ್ ಗಳನ್ನು ಚಪ್ಪರಿಸಿ ತಿನ್ನೋದು ಮಾತ್ರವಲ್ಲ ಅದನ್ನು ಮುಖ, ಮೈ ಕೈಗೆ ಹಚ್ಚಿಕೊಂಡ್ರೆ ಸಾಕಷ್ಟು ಲಾಭವಿದೆ. ಅದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ. ಈ ಹೊಸ ಬ್ಯೂಟಿ ಟಿಪ್ಸ್ ಟ್ರೈ ಮಾಡಿ.

ಚಾಕಲೇಟ್ ತಿನ್ನೋದ್ರಿಂದ ಮೆದುಳು ಚುರುಕಾಗುತ್ತದೆ ಜೊತೆಗೆ ಹೃದಯದ ಸಮಸ್ಯೆಯೂ ನಿವಾರಣೆಯಾಗುತ್ತದೆ ಅನ್ನೋದು ಈ ಹಿಂದೆಯೇ ಸಂಶೋಧನೆಯಿಂದ ಬೆಳಕಿಗೆ ಬಂದಿತ್ತು. ಈಗ ಚಾಕಲೇಟ್ ನಲ್ಲಿರೋ ಸೌಂದರ್ಯದ ರಹಸ್ಯವನ್ನು ಕೂಡ ತಜ್ಞರು ಬಿಚ್ಚಿಟ್ಟಿದ್ದಾರೆ.

ಚಾಕಲೇಟ್ ನಲ್ಲಿ ಆ್ಯಂಟಿ ಒಕ್ಸಿಡೆಂಟ್ಸ್ ಹೇರಳವಾಗಿರುವುದರಿಂದ ಅದು ಚರ್ಮ ಸುಕ್ಕಾಗದಂತೆ ಕಾಪಾಡುತ್ತದೆ. ಅತ್ಯಂತ ಸೂಕ್ಷ್ಮ ಹಾಗೂ ಡ್ರೈ ಸ್ಕಿನ್ ಗೆ ಕೂಡ ಇದು ಹೇಳಿ ಮಾಡಿಸಿದಂತಿದೆ. ಡಾರ್ಕ್ ಚಾಕಲೇಟ್ ಹಚ್ಚುವುದರಿಂದ ನಿಮ್ಮ ಚರ್ಮ  ಮೃದುವಾಗುತ್ತದೆ, ಹೊಳಪು ಪಡೆಯುತ್ತದೆ.

ಚರ್ಮವನ್ನು ಯಾವಾಗಲೂ ಹೈಡ್ರೇಟ್ ಆಗಿಟ್ಟು, ಯುವಿ ಡ್ಯಾಮೇಜ್ ಆಗದಂತೆ ಚಾಕಲೇಟ್ ಕಾಪಾಡಬಲ್ಲದು. ಪಾರ್ಲರ್ ಗಳಲ್ಲಿ ಚಾಕಲೇಟ್ ಫೇಶಿಯಲ್ ಕೂಡ  ಹೊಸ ಟ್ರೆಂಡ್. ನಿಮ್ಮ ಮುಖದಲ್ಲಿರುವ ಸುಕ್ಕನ್ನು ಇದು ಮಾಯ ಮಾಡಬಲ್ಲದು. ಅರ್ಧ ಕಪ್ ನಷ್ಟು ಕೋಕಾ ಪೌಡರ್ ಗೆ 2-3 ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆರಸ ಬೆರೆಸಿ.

ಅದನ್ನು ಚೆನ್ನಾಗಿ ಕಲೆಸಿಕೊಂಡು ಫೇಸ್ ಮಾಸ್ಕ್ ನಂತೆ ಹಚ್ಚಿಕೊಳ್ಳಿ. 15-20 ನಿಮಿಷ ಹಾಗೇ ಬಿಟ್ಟು ನಂತರ ಸ್ವಚ್ಛವಾಗಿ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮುಖ ಅಂದವಾಗಿ ಕಾಣುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read