ಹೊಳೆಯುವ ಮುಖ ಪಡೆಯಲು ‘ಕ್ಯಾರೆಟ್’ ಕ್ರೀಂ ಬಳಸಿ

ಕ್ಯಾರೆಟ್ ಆರೋಗ್ಯ ಮತ್ತು ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಬೀಟಾ ಕ್ಯಾರೋಟಿನ್, ವಿಟಮಿನ್ ಎ ಮತ್ತು ಇ ಸಮೃದ್ಧವಾಗಿದೆ. ಇದು ಸೂರ್ಯನ ಕಿರಣಗಳಿಂದ ಚರ್ಮ ಹಾನಿಯಾಗುವುದನ್ನು ತಡೆಯುತ್ತದೆ. ಹಾಗಾಗಿ ಈ ಕ್ಯಾರೆಟ್ ನಿಂದ ಕ್ರೀಂ ತಯಾರಿಸಿ ಬಳಸಿ.

2 ಚಮಚ ಕ್ಯಾರೆಟ್ ಜ್ಯೂಸ್ ಗೆ 1 ½ ಚಮಚ ಅಲೋವೆರಾ ಜೆಲ್ ಮಿಕ್ಸ್ ಮಾಡಿ ರೋಸ್ ವಾಟರ್ 1 ಚಮಚ, ವಿಟಮಿನ್ ಇ ಕ್ಯಾಪ್ಸುಲ್, ಲ್ಯಾವೆಂಡರ್ ಆಯಿಲ್ 5 ಹನಿಗಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಗಾಳಿಯಾಡದಂತೆ ಒಂದು ಗಾಜಿನ ಪಾತ್ರೆಯಲ್ಲಿ ಸ್ಟೋರ್ ಮಾಡಿ ಇಡಿ. ಈ ಕ್ರೀಂನ್ನು 15 ದಿನಗಳ ಕಾಲ ಸಂಗ್ರಹಿಸಿಡಬಹುದು.

ಇದನ್ನು ಹಗಲು ಮತ್ತು ರಾತ್ರಿ ಮುಖಕ್ಕೆ ಬಳಸಿ. ಇದರಿಂದ ಚರ್ಮದಲ್ಲಿ ಮೂಡಿರುವ ಸುಕ್ಕುಗಳು, ಕಲೆಗಳು, ಮಾಯವಾಗುತ್ತದೆ. ಚರ್ಮದ ಹೊಳಪು ಹೆಚ್ಚಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read