ಯುವತಿಯ ಗಾಲಿ ಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ತಳ್ಳಿದ ವಿದ್ಯಾರ್ಥಿಗಳು….! ಶಾಕಿಂಗ್‌ ವಿಡಿಯೋ ವೈರಲ್

 

ಮಹಿಳೆಯೊಬ್ಬರಿದ್ಧ ಗಾಲಿಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ಎಳೆದ ಆಪಾದನೆ ಮೇಲೆ ಕಾಲೇಜೊಂದರ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಜರುಗಿದೆ.

ಕಾರ್ಸನ್ ಬ್ರಿಯರಿ, 23, ಹಾಗೂ ಪ್ಯಾಟ್ರಿಕ್ ಕ್ಯಾರ‍್ರೋಜ್ಜಿ, 21, ಎಂದು ಗುರುತಿಸಲಾದ ಈ ವಿದ್ಯಾರ್ಥಿಗಳು ಕ್ರಿಮಿನಲ್ ಚೇಷ್ಟೆ ಹಾಗೂ ಅಸಭ್ಯ ನಡವಳಿಕೆ ಆಪಾದನೆ ಸಂಬಂಧ ಮೇ 22ರಂದು ಪ್ರಾಥಮಿಕ ಆಲಿಕೆಯಲ್ಲಿ ಭಾಗಿಯಾಗಬೇಕಿದೆ.

22 ವರ್ಷ ವಯಸ್ಸಿನ ಸಿಡ್ನಿ ಬೆನೆಸ್ ಹೆಸರಿನ ಯುವತಿಯ ಗಾಲಿಕುರ್ಚಿಯೊಂದಿಗೆ ಆಟವಾಡುತ್ತಿದ್ದ ಈ ಯುವಕರು, ನೋಡ ನೋಡುತ್ತಲೇ ಅದನ್ನು ಮೆಟ್ಟಿಗಳ ಕೆಳಗೆ ತಳ್ಳುತ್ತಿರುವ ದೃಶ್ಯವು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರು ಅಫಘಾತವೊಂದರಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಈ ವಿದ್ಯಾರ್ಥಿನಿ 2021  ರಿಂದಲೂ ಗಾಲಿಕುರ್ಚಿಯನ್ನು ಅವಲಂಬಿಸಿದ್ದಾರೆ.

ಮೆರ್ಸಿಹರ್ಸ್ಟ್ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿ ಅಥ್ಲೀಟ್‌ಗಳನ್ನು, ಮುಂದಿನ ಆದೇಶ ಬರುವವರೆಗೂ ’ಆಂತರಿಕ ಅಮಾನತಿನಲ್ಲಿ’ ಇರಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read