ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂ. ಗೆದ್ದ ಬಡಮಹಿಳೆ

ಆಸ್ಟ್ರೇಲಿಯಾ: ಕೆಲವು ವರ್ಷಗಳ ಹಿಂದೆ ನಿರಾಶ್ರಿತರಾಗಿದ್ದ ಆಸ್ಟ್ರೇಲಿಯಾದ ಯುವತಿಯೊಬ್ಬರು, ಒಂದು ದಿನ ಮಿಲಿಯನೇರ್ ಆಗುವುದನ್ನು ಕಲ್ಪಿಸಿಕೊಂಡಿರಲಿಲ್ಲ. ಆದರೆ ಅದೃಷ್ಟ ಅವಳ ಪರವಾಗಿ ಕೆಲಸ ಮಾಡಿದೆ. ಲೂಸಿಯಾ ಫೋರ್ಸೆತ್ ಎಂದು ಗುರುತಿಸಲಾಗಿದ್ದು, ಯುವತಿ ಸ್ಕ್ರ್ಯಾಚರ್ಸ್ ಟಿಕೆಟ್‌ನಿಂದ $5 ಮಿಲಿಯನ್ (ಅಂದಾಜು ರೂ 40 ಕೋಟಿ) ಗೆದ್ದಿದ್ದಾರೆ.

ಕ್ಯಾಲಿಫೋರ್ನಿಯಾ ಲಾಟರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ ಲೂಸಿಯಾ 2017 ರಲ್ಲಿ ನಿರಾಶ್ರಿತರಾಗಿದ್ದರು ಮತ್ತು ವರ್ಷಗಳಲ್ಲಿ ಅವರು ತಮ್ಮ ಜೀವನವನ್ನು ಉತ್ತಮಗೊಳಿಸಲು ಶ್ರಮಿಸುತ್ತಿದ್ದರು. ಈಕೆ ಪಿಟ್ಸ್‌ಬರ್ಗ್‌ನ ವಾಲ್‌ಮಾರ್ಟ್ ಸೂಪರ್‌ಸೆಂಟರ್‌ನಲ್ಲಿ ಸ್ಕ್ರ್ಯಾಚರ್ಸ್ ಟಿಕೆಟ್ ಖರೀದಿಸಿದಳು. ಆದರೆ ಅದೃಷ್ಟ ಕೈಹಿಡಿದಿತ್ತು.

ಲೂಸಿಯಾ ಟಿಕೆಟ್ ಆಯ್ಕೆಮಾಡುವಾಗ ಆತಂಕಕ್ಕೊಳಗಾಗಿದ್ದಳು. ಆಮೇಲೆ ನೋಡಿದರೆ ಕೋಟಿಗಟ್ಟಲೆ ಗೆದ್ದಿದ್ದಾಳೆ. ನಾನು ಕನಸು ಕಾಣುತ್ತಿದ್ದೇನೆ ಎಂದು ಮೊದಲು ಭಾವಿಸಿದೆ. ಆದರೆ ಕೊನೆಗೆ ಇದು ನಿಜ ಎಂದು ತಿಳಿಯಿತು ಎಂದಿದ್ದಾಳೆ. “ನಾನು ನಿರಾಶ್ರಿತಳಾಗಿದ್ದೆ. ಈ ವರ್ಷ ನಾನು ಮದುವೆಯಾಗುತ್ತಿದ್ದೇನೆ, ಪದವಿಯನ್ನು ಪಡೆಯುತ್ತಿದ್ದೇನೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read