2024 ರ ಪವರ್‌ಬಾಲ್ ಮಿಲಿಯನೇರ್‌ನ ವಿಜೇತೆ ಎಂದು ಘೋಷಿಸ್ತಿದ್ದಂತೆ ಅಮೆರಿಕದ ಉತ್ತರ ಕೆರೊಲಿನಾದ ಮಹಿಳೆ ಕಾರ್ಯಕ್ರಮದ ನೇರಪ್ರಸಾರದಲ್ಲೇ ಸಂತಸದಿಂದ ಕುಣಿಯುತ್ತಾ ವೇದಿಕೆಯಲ್ಲೇ ಬಿದ್ದರು. ಕಾರ್ಯಕ್ರಮ ನಿರೂಪಕ ರಿಯಾನ್ ಸೀಕ್ರೆಸ್ಟ್ ಅವರು ಸ್ಪರ್ಧೆಯಲ್ಲಿ ವಿಜೇತರ ಸಂಖ್ಯೆಯನ್ನು ಘೋಷಿಸ್ತಿದ್ದಂತೆ, ಮಹಿಳೆ ಸಂಭ್ರಮದಿಂದ ಕುಣಿಯುತ್ತಾ ನೆಲದ ಮೇಲೆ ಉರುಳಿಬಿದ್ದರು.
”ಪಮೇಲಾ! ನೀವು ಮಿಲಿಯನೇರ್ !” ಎಂದು ರಿಯಾನ್ ಸೀಕ್ರೆಸ್ಟ್ ಘೋಷಿಸಿದರು. ಸಂತಸದ ಆಘಾತ ಮತ್ತು ಉತ್ಸಾಹದಿಂದ ಕುಣಿದ ಪಮೇಲಾ ಬ್ರಾಡ್‌ಶಾ ನೆಲದ ಮೇಲೆ ಬಿದ್ದರು. ನಂತರ ನಿರೂಪಕ ಮತ್ತು ಪಮೇಲಾ ಅವರ ಮಗಳು ಜೊವಾನ್ನಾ ಹಿನ್ಸನ್ ಸಹಾಯಕ್ಕೆ ಧಾವಿಸಿ ಅವರನ್ನು ಮೇಲಕ್ಕೆತ್ತಿದರು. “ಓ ದೇವರೇ!” ಎಂದು ಪಮೇಲಾ ಉತ್ಸಾಹದಿಂದ ಕೂಗುತ್ತಾ ತನ್ನ ಮಗಳನ್ನು ತಬ್ಬಿಕೊಂಡರು.
ನ್ಯೂ ಇಯರ್ಸ್ ರಾಕಿನ್ ಈವ್‌ನ ಅಧಿಕೃತ ಟ್ವಿಟರ್ ಖಾತೆಯು ಈ ವೀಡಿಯೊವನ್ನು ಹಂಚಿಕೊಂಡಿದ್ದು, ”ಸಮಯವು ಅಂತಿಮವಾಗಿ ಬಂದಿದೆ……ನಮ್ಮ ಪವರ್‌ಬಾಲ್ ವರ್ಷದ ಮೊದಲ ಮಿಲಿಯನೇರ್… ಉತ್ತರ ಕೆರೊಲಿನಾದ ಪಮೇಲಾ ಬ್ರಾಡ್‌ಶಾ,” ಎಂದು ಪೋಸ್ಟ್ ಮಾಡಿದೆ.
ಗಮನಾರ್ಹವಾಗಿ ಪಮೇಲಾ ಅವರು ಅಮೆರಿಕದ ಪವರ್‌ಬಾಲ್ ವರ್ಷದ ಮೊದಲ ಮಿಲಿಯನೇರ್ ಆದ ಸತತ ಎರಡನೇ ಉತ್ತರ ಕೆರೊಲಿನಿಯನ್ ಆಗಿದ್ದಾರೆ. ಪಮೇಲಾ ಬ್ರಾಡ್‌ಶಾ ಕ್ಲಿಂಟನ್‌ನಿಂದ ಬಂದವರು. ಅಮೆರಿಕದಾದ್ಯಂತ 1 ಮಿಲಿಯನ್ ಡಾಲರ್ ಗೆಲ್ಲಲು ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ಆಯ್ಕೆಯಾದ ಐದು ಪವರ್‌ಬಾಲ್ ಆಟಗಾರರಲ್ಲಿ ಅವರೂ ಒಬ್ಬರಾಗಿದ್ದರು.
ಈ ಹಣವನ್ನು ಏನು ಮಾಡುತ್ತೀರಿ ಎಂದು ಕೇಳಿದಾಗ ಪಮೇಲಾ ಬ್ರಾಡ್‌ಶಾ ಅದನ್ನು ಮನೆ ಖರೀದಿಸಲು ಬಳಸಬೇಕೆಂದು ಹೇಳಿದರು. “ನನ್ನ ಸ್ವಂತ ಮನೆಯನ್ನು ಹೊಂದಲು ನಾನು ಇಷ್ಟಪಡುತ್ತೇನೆ , ಆಗ ಮಾತ್ರ ನಾನು ಸುರಕ್ಷಿತವಾಗಿರುತ್ತೇನೆ. ಅಲಂಕಾರಿಕ ಅಥವಾ ದೊಡ್ಡದಾದ ಮನೆಯಲ್ಲ, ಕೇವಲ ಒಂದು ಸಣ್ಣ ಕಾಟೇಜ್ ಅಥವಾ ಒಂದು ಅಥವಾ ಎರಡು ಬೆಡ್ ರೂಂ ಇರುವ ಮನೆ ಸಾಕು” ಎಂದಿದ್ದಾರೆ. ಜೊತೆಗೆ ಬಂದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಮಗಳಿಗೆ ನೀಡುವುದಾಗಿ ತಿಳಿಸಿದ್ದಾರೆ.
https://twitter.com/RockinEve/status/1741692466515107931?ref_src=twsrc%5Etfw%7Ctwcamp%5Etweetembed%7Ctwterm%5E1741692466515107931%7Ctwgr%5Ee577b715a7c3509e9776dd84eab5224f403b6e12%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-us-woman-collapses-on-live-tv-after-winning-1-million-lottery-on-new-years-eve-4786566
https://twitter.com/RockinEve/status/1741713354639413627?ref_src=twsrc%5Etfw%7Ctwcamp%5Etweetembed%7Ctwterm%5E1741713354639413627%7Ctwgr%5Ee577b715a7c3509e9776dd84eab5224f403b6e12%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-us-woman-collapses-on-live-tv-after-winning-1-million-lottery-on-new-years-eve-4786566