Shocking: ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲೈಂಗಿಕ ಸಂಪರ್ಕ; ಕಾವಲು ಕಾಯುತ್ತಿದ್ದರಂತೆ ಸಹಪಾಠಿಗಳು…!

ಅಮೆರಿಕದ ಮಿಸೌರಿಯಲ್ಲಿ ಹೈಸ್ಕೂಲ್ ನ 26 ವರ್ಷದ ಮಾಜಿ ಗಣಿತ ಶಿಕ್ಷಕಿ 16 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕದ ಅಪರಾಧವೆಸಗಿದ್ದು ತಪ್ಪೊಪ್ಪಿಕೊಂಡಿದ್ದಾಳೆ.

ಶಿಕ್ಷಕಿ ಹೈಲಿ ಕ್ಲಿಫ್ಟನ್-ಕಾರ್ಮ್ಯಾಕ್ ಳನ್ನು ವಿದ್ಯಾರ್ಥಿಯೊಂದಿಗಿನ ಲೈಂಗಿಕ ಸಂಬಂಧಕ್ಕಾಗಿ ಜನವರಿಯಲ್ಲಿ ಬಂಧಿಸಲಾಯಿತು. ಶಿಕ್ಷಕಿ ವಿದ್ಯಾರ್ಥಿಯೊಂದಿಗೆ  ಲೈಂಗಿಕ ಸಂಪರ್ಕ ಮಾಡುವಾಗ ಇತರ ವಿದ್ಯಾರ್ಥಿಗಳು ಕಾವಲು ಕಾಯುತ್ತಿದ್ದರು ಎಂದು ಪೀಪಲ್ ವಾರ ಪತ್ರಿಕೆಯಲ್ಲಿ ವರದಿಯಾಗಿದೆ. ಅಕ್ಟೋಬರ್ 11 ರಂದು ಪ್ರಕಟವಾಗಲಿರುವ ಶಿಕ್ಷೆಗಾಗಿ ಕಾಯುತ್ತಿರುವ ಆಕೆ ಪ್ರಸ್ತುತ ಗೃಹಬಂಧನದಲ್ಲಿದ್ದಾರೆ.

ಮಿಸೌರಿಯ ಲೈಂಗಿಕ ಅಪರಾಧಿಗಳ ಮೌಲ್ಯಮಾಪನ ಕಾರ್ಯಕ್ರಮದ ಅಡಿಯಲ್ಲಿ ಕ್ಲಿಫ್ಟನ್-ಕಾರ್ಮ್ಯಾಕ್ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಾಳೆ. ಆರಂಭದಲ್ಲಿ ಕ್ಲಿಫ್ಟನ್-ಕಾರ್ಮ್ಯಾಕ್ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕದ ಜೊತೆಗೆ ಮಕ್ಕಳ ಕಿರುಕುಳ, ಶಾಸನಬದ್ಧ ಅತ್ಯಾಚಾರ ಮತ್ತು ಮಗುವಿನ ಯೋಗಕ್ಷೇಮಕ್ಕೆ ಅಪಾಯವನ್ನುಂಟುಮಾಡುವ ಆರೋಪವನ್ನು ಹೊರಿಸಲಾಗಿತ್ತು.

ಪೀಪಲ್ ಪತ್ರಿಕೆಯಲ್ಲಿ ವರದಿಯಾಗಿರುವಂತೆ ವಿದ್ಯಾರ್ಥಿ ಹೇಳಿಕೆಯ ಪ್ರಕಾರ, ಕ್ಲಿಫ್ಟನ್-ಕಾರ್ಮ್ಯಾಕ್ ತನ್ನ ವೈಯಕ್ತಿಕ ಜೀವನವನ್ನು ತರಗತಿಯಲ್ಲಿ ಬಹಿರಂಗವಾಗಿ ಚರ್ಚಿಸಿದ್ದರು ಎಂದು ಬಹಿರಂಗಪಡಿಸಿದರು. ವಿದ್ಯಾರ್ಥಿಗಳೊಂದಿಗೆ ತುಂಬಾ ಹತ್ತಿರವಾಗಿರುವುದರಿಂದ ಶಾಲಾ ಆಡಳಿತದೊಂದಿಗಿದ್ದ ಜಗಳವನ್ನೆಲ್ಲಾ ಹೇಳಿಕೊಂಡಿದ್ದರಂತೆ. ಇಷ್ಟೇ ಅಲ್ಲದೇ ಕ್ಲಿಫ್ಟನ್-ಕಾರ್ಮ್ಯಾಕ್ ಅವರ ವಿಚ್ಛೇದನಕ್ಕೆ ಸಂತ್ರಸ್ತ ವಿದ್ಯಾರ್ಥಿ ಕಾರಣ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಒಂದು ಮಗು ಹೊಂದಿದ್ದ ಕ್ಲಿಫ್ಟನ್-ಕಾರ್ಮ್ಯಾಕ್ ದಂಪತಿ ನಡುವೆ ವಿರಸವುಂಟಾಗಿ ಆಗಸ್ಟ್ 2023 ರಲ್ಲಿ ಆಕೆಯ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಒಂದು ತಿಂಗಳ ಬಳಿಕ ಅವರು ಅಧಿಕೃತವಾಗಿ ವಿಚ್ಛೇದನ ಪಡೆದರು ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read