ಹರಿದ ಜೀನ್ಸ್‌ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿ: ಮುಂದೇನಾಯ್ತು ನೋಡಿ

ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್‌ಕೋಡ್‌ಗಳು ಅಗತ್ಯವಾಗಿರುತ್ತವೆ. ಇದೇ ಕಾರಣಕ್ಕೆ ಹಲವು ಕಡೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಇದು ಭಾರತ ಮಾತ್ರವಲ್ಲದೇ ಬಹುತೇಕ ಎಲ್ಲಾ ದೇಶಗಳಲ್ಲಿಯೂ ಕಂಡುಬರುತ್ತದೆ. ಇದರ ಹೊರತಾಗಿಯೂ ಕೆಲವು ವಿದ್ಯಾರ್ಥಿಗಳು ಡ್ರೆಸ್‌ಕೋಡ್‌ ಮೀರಿ ಬಟ್ಟೆ ಹಾಕಿಕೊಂಡು ಬರುವುದು ಉಂಟು.

ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಇದು ನಡೆದಿರುವುದು ಅಮೆರಿಕದಲ್ಲಿ, ವಿದ್ಯಾರ್ಥಿನಿಯೊಬ್ಬಳು ಸಿಕ್ಕಾಪಟ್ಟೆ ಹರಿದಿರುವ ಮೈಯೆಲ್ಲಾ ಕಾಣುವ ಜೀನ್ಸ್‌ ತೊಟ್ಟು ಶಾಲೆಗೆ ಬಂದಿದ್ದಳು. ಇದರಿಂದ ಶಿಕ್ಷಕರು ಕೆಂಡಾಮಂಡಲರಾಗಿದ್ದಾರೆ.

ಸಮವಸ್ತ್ರ ನೀತಿಯನ್ನು ಮರೆತು ಜೀನ್ಸ್‌ ತೊಟ್ಟಿದ್ದೂ ಅಲ್ಲದೇ, ಅದು ಸಂಪೂರ್ಣ ಹರಿದುಹೋದ ಫ್ಯಾಷನ್‌ ಆಗಿರುವುದರಿಂದ ಸಿಟ್ಟಿಗೆದ್ದ ಶಿಕ್ಷಕರು ಆಕೆಯನ್ನು ವಾಪಸ್‌ ಮನೆಗೆ ಕಳುಹಿಸಲಿಲ್ಲ. ಬದಲಿಗೆ ಬುದ್ಧಿ ಕಲಿಸಲು ಎಲ್ಲೆಲ್ಲಿ ಹರಿದಿದೆಯೋ ಅಲ್ಲೆಲ್ಲಾ ಗಮ್‌ ಟೇಪ್‌ ಹಚ್ಚಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಬಾಲಕಿ ಈ ವಿಷಯವನ್ನು ಮನೆಗೆ ಹೋಗಿ ತಿಳಿಸಿದಾಗ ಪಾಲಕರು ಶಾಲೆಯ ಮೇಲೆ ಕೇಸ್‌ ಹಾಕಿದ್ದಾರೆ.

ಮಗಳ ಚರ್ಮಕ್ಕೆ ಟೇಪ್‌ಗಳು ಅಂಟಿದ್ದು, ಅದರಿಂದ ಆಕೆ ತುಂಬಾ ನೋವು ಅನುಭವಿಸುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದು, ಇದರ ವಿಚಾರಣೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read