BIG NEWS : ಇಸ್ರೇಲ್ ಗೆ ಸಂಪೂರ್ಣ ಬೆಂಬಲ ಘೋಷಿಸಿದ ಅಮೆರಿಕ ಅಧ್ಯಕ್ಷ ‘ಜೋ ಬೈಡನ್’

ಇಸ್ರೇಲ್-ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್ ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ಈ ಬಗ್ಗೆ ಘೋಷಿಸಿದ ಜೋ ಬೈಡೆನ್ ಇಂತಹ ಸಂದರ್ಭದಲ್ಲಿ ನಾವು ಇಸ್ರೇಲ್ ಜೊತೆ ಇರುತ್ತೇವೆ, ಇಸ್ರೇಲ್ ಗೆ ಎಲ್ಲಾ ರೀತಿಯ ನೆರವು ಘೋಷಿಸುವುದಾಗಿ ಜೋ ಬೈಡೆನ್ ಘೋಷಿಸಿದ್ದಾರೆ. ಹಮಾಸ್ ದಾಳಿಗೆ ಇಸ್ರೇಲ್ ಬೆಚ್ಚಿಬಿದ್ದಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಹಮಾಸ್ ಮೇಲೆ ದಾಳಿ ನಡೆಸಿದೆ.

ಇಸ್ರೇಲ್-ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಿಲುಕಿರುವ 447 ಭಾರತೀಯರನ್ನು ‘ಆಪರೇಷನ್ ಅಜಯ್’ ಅಡಿಯಲ್ಲಿ ಮರಳಿ ಕರೆತರುವ ಕೇಂದ್ರದ ಪ್ರಯತ್ನಗಳು ಯಶಸ್ವಿಯಾಗಿವೆ. 235 ಪ್ರಯಾಣಿಕರನ್ನು ಹೊತ್ತ ಎರಡನೇ ವಿಮಾನ ಶನಿವಾರ ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಈ ಸಂದರ್ಭದಲ್ಲಿ ಪ್ರಯಾಣಿಕರು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಅವರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿರುವುದಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಂತೋಷ ವ್ಯಕ್ತಪಡಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read