ಮನೆ ಅಟ್ಟದಿಂದ ಬಂದ ವಿಚಿತ್ರ ಸದ್ದು ಕೇಳಿ ಹುಡುಕಿಕೊಂಡು ಹೋದ ವ್ಯಕ್ತಿಗೆ ಕಾದಿತ್ತು‌ ಶಾಕ್…!

ಸಾಮಾನ್ಯವಾಗಿ ಮನೆ ಎಂದರೆ ನಮಗೆ ಸುರಕ್ಷಿತವೆನಿಸುವ ಜಾಗ. ಆದರೆ ನಿಮ್ಮ ಮನೆಗೆ ಅಪರಿಚಿತರು ನುಗ್ಗಿದಾಗ ನೀವೇನು ಮಾಡುವಿರಿ ? ಇತ್ತೀಚೆಗೆ ತನ್ನ ಮನೆಯ ಅಟ್ಟದಿಂದ ಅಪರಿಚಿತ ದನಿಯನ್ನು ಕೇಳುತ್ತಿದ್ದ ವ್ಯಕ್ತಿಯೊಬ್ಬನಿಗೆ ತನ್ನ ಮನೆಯಲ್ಲಿ ಅಪರಿಚಿತ ಹೆಂಗಸೊಬ್ಬಳು ವಾಸಿಸುತ್ತಿರುವುದು ತಿಳಿದು ಬಂದಿದೆ.

ಮನೆಯ ಅಟ್ಟದಿಂದ ಪದೇ ಪದೇ ವಿಚಿತ್ರ ಸದ್ದು ಬರುತ್ತಿರುವುದನ್ನು ಕಂಡು ಅನುಮಾನಗೊಂಡ ಡೇವಿಸ್ ವಾಹ್ಲಾಮ್ ಏನಾಗಿದೆ ಎಂದು ನೋಡಲು ಮುಂದಾಗುತ್ತಾರೆ. ಈ ಮಹಿಳೆ ಕಂಡು ಬಂದ ಮನೆಯ ಮೇಲಂತಸ್ತಿನ ಪ್ರವೇಶವು ಲಾಕ್ ಆಗಿದ್ದು, ಒಳಗಿಂದ ದನಿಯೊಂದು ಬಂದು, “ಜಿಮ್ಮಿ ? ನೀವು ಜಿಮ್ಮಿಯೇ ?” ಎಂದು ಕೇಳಿದೆ.

ಬಾಗಿಲು ತೆರೆಯುತ್ತಲೇ ಅಪರಿಚಿತ ಮಹಿಳೆಯೊಬ್ಬಳು ಅಲ್ಲಿ ಸೇರಿರುವುದನ್ನು ಕಂಡು ಡೇವಿಡ್ ಶಾಕ್ ಆಗಿದ್ದಾರೆ. ಡೇವಿಡ್‌ ನನ್ನು ’ನೀನು ಜಿಮ್ಮಿಯೇ ?” ಎಂದು ಕೇಳಿದ ಈ ಅಪರಿಚಿತ ಮಹಿಳೆ, ’ಜಿಮ್ಮಿ ಎಂಬ ವ್ಯಕ್ತಿ ನನಗೆ ಇಲ್ಲಿ ವಾಸಿಸಲು ಹೇಳಿದ್ದಾನೆ” ಎಂದು ಆತನೊಂದಿಗೆ ವಾದ ಮಾಡಿದ್ದಾಳೆ.

ಇದಾದ ಬಳಿಕ ಏನಾಗುತ್ತಿದೆ ಎಂದು ಅರಿಯಲು ಯತ್ನಿಸಿದ ಡೇವಿಡ್ ಕೂಡಲೇ 911 ಗೆ ಕರೆ ಮಾಡಿದ್ದಾರೆ. ಅಲ್ಲಿವರೆಗೂ ಜಿಮ್ಮಿ ಎಂಬ ವ್ಯಕ್ತಿ ತನಗೆ ಅಲ್ಲಿ ವಾಸಿಸಲು ಹೇಳಿದ್ದಾಗಿ ವಾದ ಮಾಡುತ್ತಿದ್ದ ಈ ಅಪರಿಚಿತ ಮಹಿಳೆ ಪೊಲೀಸರು ಬರುತ್ತಲೇ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಕರೆ ಮಾಡಿದ 18 ನಿಮಿಷಗಳವರೆಗೂ ಪೊಲೀಸರು ಬರಲಿಲ್ಲವೆಂದು ಡೇವಿಡ್ ಇದೇ ವೇಳೆ ಹತಾಶೆ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read