BIG NEWS: ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಯುವಕ ಸಾವು !

US: Gujarat Man Dies Tragic Death In Hit & Run Accident In Houston; Run Over By 14 Vehicles

ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಗುಜರಾತ್ ಮೂಲದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಪಠಾಣ್ ಜಿಲ್ಲೆಯ ದರ್ಶಿಲ್ ಥಕ್ಕರ್ ಹೂಸ್ಟನ್ ನಲ್ಲಿ ಮೃತಪಟ್ಟಿದ್ದು, ಪ್ರವಾಸಿ ವೀಸಾದಲ್ಲಿ ಇವರು ಅಮೆರಿಕಾಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಜುಲೈ 29 ರಂದು ಬೆಳಗ್ಗೆ 11:30 ರ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ದರ್ಶಿಲ್ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ಸಿಗ್ನಲ್ ನಲ್ಲಿ ಏಕಾಏಕಿ ಹಸಿರು ದೀಪ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ದರ್ಶಿಲ್ ಅವರಿಗೆ ಡಿಕ್ಕಿ ಹೊಡೆದಿದ್ದು, ಆಘಾತಕಾರಿ ಸಂಗತಿ ಎಂದರೆ ಇದೇ ವೇಳೆ ಹತ್ತಕ್ಕೂ ಅಧಿಕ ಕಾರುಗಳು ಅವರ ದೇಹದ ಮೇಲೆ ಹರಿದುಹೋಗಿವೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ದರ್ಶಿಲ್ ಅವರ ದೇಹ ಛಿದ್ರಛಿದ್ರವಾಗಿದ್ದು, ದೇಹವನ್ನು ಭಾರತಕ್ಕೆ ತರುವುದಕ್ಕೆ ಸಮಸ್ಯೆಯಾಗಿದೆ ಎನ್ನಲಾಗಿದೆ. ಸೆಪ್ಟಂಬರ್ 26ರಂದು ಭಾರತಕ್ಕೆ ವಾಪಸ್ ಬರಬೇಕಿದ್ದ ಮಗ ಈಗ ದುರಂತದಲ್ಲಿ ಮೃತಪಟ್ಟಿರುವುದರಿಂದ ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ಇದೀಗ ದರ್ಶಿಲ್ ಕುಟುಂಬದ ನಾಲ್ಕೈದು ಮಂದಿ ಸದಸ್ಯರು ಆತನ ಮೃತ ದೇಹವನ್ನು ಭಾರತಕ್ಕೆ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read