ಅಮೆರಿಕದಲ್ಲಿ ಭೀಕರ ವಿನಾಶಕಾರಿ ಸುಂಟರಗಾಳಿಗೆ 34 ಜನ ಬಲಿ; ವಿದ್ಯುತ್ ಇಲ್ಲದೇ 1.5 ಲಕ್ಷಕ್ಕೂ ಹೆಚ್ಚು ಜನ ಕತ್ತಲಲ್ಲೇ ವಾಸ

ಪೆನ್ಸಿಲ್ವೇನಿಯಾ: ಅಮೆರಿಕ ಭೀಕರ ದೈತ್ಯ ಹವಾಮಾನವನ್ನು ಎದುರಿಸುತ್ತಿದೆ. ವಿನಾಶಕಾರಿ ಸುಂಟರಗಾಳಿ 34 ಜನರ ಬಲಿ ಪಡೆದಿದ್ದು, 1.5 ಲಕ್ಷಕ್ಕೂ ಹೆಚ್ಚು ಜನರಿಗೆ ವಿದ್ಯುತ್ ಇಲ್ಲದಂತಾಗಿದೆ

ಅಮೆರಿಕದ ಪಶ್ಚಿಮ ವರ್ಜೀನಿಯಾ, ಓಹಿಯೋ ಮತ್ತು ಪೆನ್ಸಿಲ್ವೇನಿಯಾದ ಕೆಲವು ಭಾಗಗಳಲ್ಲಿ ಭೀಕರ ಸುಂಟರಗಾಳಿ ಉಂಟಾಗಿದೆ.

ಶುಕ್ರವಾರದಿಂದ ಆರು ರಾಜ್ಯಗಳಲ್ಲಿ ಬಿರುಗಾಳಿಗಳಿಂದ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 34 ಕ್ಕೆ ಏರಿದೆ. ಪವರ್‌ ಔಟೇಜ್ ವೆಬ್‌ಸೈಟ್ ಪ್ರಕಾರ, ದೊಡ್ಡ, ಪೀಡಿತ ಪ್ರದೇಶದಲ್ಲಿ ಕನಿಷ್ಠ 1,50,000 ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದಾರೆ. ಮಿಸೌರಿ ಐದು ಕೌಂಟಿಗಳಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಮಿಸೌರಿಯ ಬಟ್ಲರ್ ಕೌಂಟಿಯ ತುರ್ತು ನಿರ್ವಹಣಾ ನಿರ್ದೇಶಕಿ ರಾಬಿ ಮೈಯರ್ಸ್ ಅವರು ಕೌಂಟಿಯಲ್ಲಿ 500 ಕ್ಕೂ ಹೆಚ್ಚು ಮನೆಗಳು, ಒಂದು ಚರ್ಚ್ ಮತ್ತು ದಿನಸಿ ಅಂಗಡಿ ನಾಶವಾಗಿದೆ. ಮೊಬೈಲ್ ಹೋಮ್ ಪಾರ್ಕ್ “ಸಂಪೂರ್ಣವಾಗಿ ನಾಶವಾಗಿದೆ” ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read