BREAKING: ಮುಂಬೈ ಯುಎಸ್ ಕಾನ್ಸುಲೇಟ್ ಕಚೇರಿಗೆ ಬೆದರಿಕೆ: ಎಫ್‌ಐಆರ್ ದಾಖಲಿಸಿ ತನಿಖೆ

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿರುವ(ಬಿಕೆಸಿ) ಯುಎಸ್ ಕಾನ್ಸುಲೇಟ್‌ಗೆ ಶನಿವಾರ ತಡರಾತ್ರಿ ಬೆದರಿಕೆಯ ಮೇಲ್ ಬಂದಿದ್ದು, ಪ್ರಕರಣ ದಾಖಲಾಗಿದೆ

ಯುಎಸ್ ಕಾನ್ಸುಲೇಟ್ ಜನರಲ್ ಕಚೇರಿಗೆ ಬೆದರಿಕೆಯ ಮೇಲ್ ಬಂದಿದ್ದು, ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಶನಿವಾರ ಮುಂಜಾನೆ 3.50 ರ ಸುಮಾರಿಗೆ rkgtrading777@gamil.com ವಿಳಾಸದಿಂದ ಇಮೇಲ್ ಸ್ವೀಕರಿಸಲಾಗಿದೆ. ಮೇಲ್‌ನಲ್ಲಿ, ವ್ಯಕ್ತಿಯು ತಾನು ಪರಾರಿಯಾಗಿರುವ ಯುಎಸ್ ಪ್ರಜೆ ಎಂದು ಹೇಳಿಕೊಂಡಿದ್ದಾನೆ. ಎಲ್ಲಾ ಯುಎಸ್ ಕಾನ್ಸುಲೇಟ್‌ಗಳನ್ನು ಸ್ಫೋಟಿಸುವುದಾಗಿ. ಅಲ್ಲಿ ಕೆಲಸ ಮಾಡುವ ಅಮೆರಿಕನ್ ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

BKC ಪೊಲೀಸ್ ಠಾಣೆಯು ಅಪರಿಚಿತ ವ್ಯಕ್ತಿಗಳ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) 505(1)(b) ಮತ್ತು 506(2) ಸೆಕ್ಷನ್‌ಗಳ ಅಡಿಯಲ್ಲಿ FIR ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದೆ.

ಒಂದು ತಿಂಗಳೊಳಗೆ ನಗರಕ್ಕೆ ಬಂದ ಎರಡನೇ ಬೆದರಿಕೆ ಇದಾಗಿದೆ. ಇದಕ್ಕೂ ಮುನ್ನ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಮ್‌ಗೆ ಫೆಬ್ರವರಿ 2 ರಂದು ನಗರದಾದ್ಯಂತ ಸರಣಿ ಬಾಂಬ್ ಸ್ಫೋಟಗಳ ಬೆದರಿಕೆ ಸಂದೇಶ ಬಂದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read