BIG NEWS: ಮಗಳ ಜಾಕೆಟ್‌ನಲ್ಲಿ ಚಿನ್ನ ಬಚ್ಚಿಟ್ಟ ತಾಯಿ ; ಅನಿವಾಸಿ ಭಾರತೀಯ ಮಹಿಳೆ ಅರೆಸ್ಟ್

ಅಮೆರಿಕದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ (NRI) ಅಮಿ ಕೋಟೆಚಾ ಮತ್ತು ಆಕೆಯ ಅಪ್ರಾಪ್ತ ಮಗಳನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5.47 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿರುವಾಗ ಶುಕ್ರವಾರ ಬಂಧಿಸಲಾಗಿದೆ. 4.86 ಕೋಟಿ ರೂ. ಮೌಲ್ಯದ ಚಿನ್ನವನ್ನು ಮಗಳ ಜಾಕೆಟ್‌ನಲ್ಲಿ ಬಚ್ಚಿಡಲಾಗಿತ್ತು. ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಕೋಟೆಚಾ ಅವರನ್ನು ಬಂಧಿಸಿದ್ದಾರೆ ಮತ್ತು ಆಕೆಯ ಅಪ್ರಾಪ್ತ ಮಗಳನ್ನು ಬಿಡುಗಡೆ ಮಾಡಿದ್ದಾರೆ.

DRI ಅಧಿಕಾರಿಗಳು ಅಮಿ ಅವರನ್ನು ತಪಾಸಣೆ ಮಾಡಿದಾಗ ಏನೂ ಪತ್ತೆಯಾಗಲಿಲ್ಲ. ಆದರೆ, ಆಕೆಯ ಮಗಳನ್ನು ತಪಾಸಣೆ ಮಾಡಿದಾಗ, ಆಕೆಯ ಜಾಕೆಟ್‌ನಲ್ಲಿ ಒಂಬತ್ತು ಚಿನ್ನದ ಬಾರ್‌ಗಳು ಕಂಡುಬಂದಿವೆ. ಮಗಳು ತನ್ನ ತಾಯಿ ಚಿನ್ನದ ಪ್ಯಾಕೆಟ್ ನೀಡಿದ್ದಾಗಿ ಮತ್ತು ಭಾರತಕ್ಕೆ ಚಿನ್ನ ತರುವುದು ಕಾನೂನುಬಾಹಿರ ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾಳೆ.

ಕೋಟೆಚಾ ತನ್ನ ಮಗಳನ್ನು ತಪಾಸಣೆ ಮಾಡುವುದಿಲ್ಲ ಎಂದು ತಿಳಿದುಕೊಂಡು ಚಿನ್ನವನ್ನು ಆಕೆಗೆ ನೀಡಿದ್ದಾಳೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದುಬೈನಲ್ಲಿ ತಂಗಿದ್ದಾಗ ಚಿನ್ನವನ್ನು ಖರೀದಿಸಿದ್ದಾಗಿ ಕೋಟೆಚಾ ಹೇಳಿದ್ದಾಳೆ.

ಹೆಚ್ಚಿನ ತನಿಖೆಯಲ್ಲಿ, ಕೋಟೆಚಾ ಅವರ ಪತಿ ಈ ಹಿಂದೆ ಭಾರತದಿಂದ 10 ಲಕ್ಷ US ಡಾಲರ್‌ಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವಾಗ ಸಿಕ್ಕಿಬಿದ್ದಿರುವುದು ತಿಳಿದುಬಂದಿದೆ.

ಕೋಟೆಚಾ ಅವರನ್ನು ಕಸ್ಟಮ್ಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನ್ನ ಕ್ಲೈಂಟ್ ಮುಗ್ಧೆ ಎಂದು ಮತ್ತು ಭಾರತಕ್ಕೆ ಚಿನ್ನ ತರುವುದು ಕಾನೂನುಬಾಹಿರ ಎಂದು ಆಕೆಗೆ ತಿಳಿದಿರಲಿಲ್ಲ ಎಂದು ಆಕೆಯ ವಕೀಲ ಅಫ್ತಾಬ್ ಖುರೇಷಿ ವಾದಿಸಿದ್ದಾರೆ.

ಚಿನ್ನವನ್ನು ಸರಕು ಘೋಷಣೆಯೊಂದಿಗೆ ಕಾನೂನುಬದ್ಧವಾಗಿ ಆಮದು ಮಾಡಿಕೊಂಡಿದ್ದರೆ, 38.5% ಸುಂಕ ಅನ್ವಯವಾಗುತ್ತಿತ್ತು ಮತ್ತು ಆಕೆ 1.87 ಕೋಟಿ ರೂ. ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗುತ್ತಿತ್ತು ಎಂದು DRI ಅಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read