ಆಸ್ಪತ್ರೆಗೆ ಸೇರಿದರೂ ರಿಷಬ್​ ಪಂತ್​ರನ್ನು ಬಿಡದ ನಟಿ: ಭಾರೀ ಟ್ರೋಲ್‌ ಗೊಳಗಾದ ಊರ್ವಶಿ ರೌಟೇಲಾ

ಇತ್ತೀಚಿನ ದಿನಗಳಲ್ಲಿ ಭಾರಿ ಟ್ರೋಲ್​ಗೆ ಒಳಗಾಗುತ್ತಿರುವ ನಟಿ ಊರ್ವಶಿ ರೌಟೇಲಾ ವಿರುದ್ಧ ಮತ್ತೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕ್ರಿಕೆಟಿಗ ರಿಷಬ್ ಪಂತ್ ಅವರ ವಿಷಯದಲ್ಲಿ ಊರ್ವಶಿ ಟ್ರೋಲ್​ ಆಗುತ್ತಿದ್ದಾರೆ.

ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಇದೆ. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಕೊನೆಗೆ ಅದು ಬ್ರೇಕಪ್​ನಲ್ಲಿ ಎಂಡ್​ ಆಗಿದೆ ಎಂದು ಸುದ್ದಿಯಾದರೂ, ಊರ್ವಶಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಇದಕ್ಕೆ ರಿಷಬ್ ಕೂಡ ಗರಂ ಆಗಿದ್ದರು.

ರಿಷಬ್​ ಪಂತ್​ ಕಳೆದ ವಾರ ತೀವ್ರ ಅಪಘಾತಕ್ಕೆ ಒಳಗಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಊರ್ವಶಿ ಅವರನ್ನು ಬಿಡಲಿಲ್ಲ. ಈ ಆಸ್ಪತ್ರೆಯ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಟೀಕೆಗೆ ಒಳಗಾಗಿದ್ದರು.

ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈತ ಮತ್ತೆ ಆಸ್ಪತ್ರೆಯ ಫೋಟೋವನ್ನ ನಟಿ ಊರ್ವಶಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ನೆಟ್ಟಿಗರು ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಊರ್ವಶಿ ಎನ್ನುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read