ಕೇಂದ್ರ ಸರ್ಕಾರ ಯು ಟರ್ನ್: ಲ್ಯಾಟರಲ್ ಎಂಟ್ರಿ ಜಾಹೀರಾತು ರದ್ದುಪಡಿಸಿದ UPSC

ನವದೆಹಲಿ: ಕೇಂದ್ರದ ನಿರ್ದೇಶನದ ನಂತರ ಯುಪಿಎಸ್‌ಸಿ ಲ್ಯಾಟರಲ್ ಎಂಟ್ರಿ ಜಾಹೀರಾತನ್ನು ಹಿಂಪಡೆದಿದೆ. ಯೋಜನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಂದ್ರದ ನಿರ್ದೇಶನದ ನಂತರ ಕೇಂದ್ರ ಲೋಕಸೇವಾ ಆಯೋಗವು ಲ್ಯಾಟರಲ್ ಎಂಟ್ರಿಗಳ ಜಾಹೀರಾತನ್ನು ಮಂಗಳವಾರ ಅಧಿಕೃತವಾಗಿ ರದ್ದುಗೊಳಿಸಿದೆ.

ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪನಿರ್ದೇಶಕರ ಹಂತದ 45 ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ.

ಯುಪಿಎಸ್‌ಸಿ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ, ಉದ್ಯೋಗ ಸುದ್ದಿಯಲ್ಲಿ ಪ್ರಕಟವಾದ ವಿವಿಧ ಇಲಾಖೆಗಳಲ್ಲಿನ ಜಂಟಿ ಕಾರ್ಯದರ್ಶಿ/ನಿರ್ದೇಶಕರು/ಉಪ ಕಾರ್ಯದರ್ಶಿಗಳ ಮಟ್ಟದ 45 ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿಗೆ ಸಂಬಂಧಿಸಿದ ಜಾಹೀರಾತು ರದ್ದುಗೊಳಿಸಲಾಗಿದೆ.

ಹಿಂದಿನ ದಿನ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಚಾಲ್ತಿಯಲ್ಲಿರುವ ಲ್ಯಾಟರಲ್ ಎಂಟ್ರಿ ಜಾಹೀರಾತನ್ನು ರದ್ದುಗೊಳಿಸುವಂತೆ ಯುಪಿಎಸ್‌ಸಿ ಅಧ್ಯಕ್ಷರಿಗೆ ತಿಳಿಸಿದ್ದರು.

ಲ್ಯಾಟರಲ್ ಎಂಟ್ರಿ ಜಾಹೀರಾತಿನ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದರು. ಆಡಳಿತಾತ್ಮಕ ಮಟ್ಟದಲ್ಲಿಯೂ ಲ್ಯಾಟರಲ್ ಎಂಟ್ರಿ ಬಾರಿ ಚರ್ಚೆಗೆ ಕಾರಣವಾಗಿತ್ತು. ಸರ್ಕಾರಿ ಇಲಾಖೆಗಳಲ್ಲಿನ ಮಧ್ಯಮ ಮತ್ತು ಹಿರಿಯ ಹುದ್ದೆಗಳಿಗೆ ಯುಪಿಎಸ್ಸಿ ಸಾಂಪ್ರದಾಯಿಕ ಸರ್ಕಾರಿ ಸೇವಾ ಕೇಡರ್ ಹೊರತುಪಡಿಸಿ ಇತರ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ಲ್ಯಾಟರಲ್ ಎಂಟ್ರಿ ಎನ್ನಲಾಗುತ್ತದೆ. 3-5 ವರ್ಷ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read