Watch : ‘ಟ್ರೆಂಡ್’ ಪದಗಳನ್ನು ಬಳಸಿ ಹಾಡು ಬರೆದ ‘ಉಪ್ಪಿ’ : ‘ಯುಐ’ ಚಿತ್ರದ ಟ್ರೋಲ್ ಸಾಂಗ್ ಸಖತ್ ವೈರಲ್ | Video

ಬೆಂಗಳೂರು : ಕರಿಮಣಿ ಮಾಲೀಕ, ಹೇ ತಗಡು, ಬೆಳ್ಳುಳ್ಳಿ ಕಬಾಬ್ ಹೀಗೆ ಟ್ರೆಂಡ್ ಪದಗಳನ್ನು ಬಳಸಿ ನಟ ಉಪೇಂದ್ರ ‘ಯುಐ’ ಚಿತ್ರಕ್ಕೆ ಹಾಡು ರಚಿಸಿದ್ದು, ಟ್ರೋಲ್ ಸಾಂಗ್ ಸಖತ್ ಸದ್ದು ಮಾಡುತ್ತಿದೆ.

ರಿಯಲ್ಸ್ಟಾರ್ ಉಪೇಂದ್ರ ಅವರ ‘ಯುಐ’ ಸಿನಿಮಾ ಈ ಹಾಡು ಎಲ್ಲಾ ಕಡೆ ಸದ್ದು ಮಾಡುತ್ತಿದೆ. ನಮ್ ಮನಸು, ಏನಂತೀರಾ, ಕರಿಮಣಿ ಮಾಲೀಕ, ಹೇ ತಗಡು, ಬೆಳ್ಳುಳ್ಳಿ ಕಬಾಬ್ ಸೇರಿದಂತೆ ಹಲವು ಟ್ರೆಂಡ್ ಪದಗಳನ್ನು ತೆಗೆದುಕೊಂಡು ಒಂದು ಹಾಡು ರಚಿಸಿದ್ದಾರೆ. ಈ ಹಾಡು ಸಖತ್ ಕ್ಯಾಚಿ ಆಗಿದ್ದು, ಎಲ್ಲರ ಗಮನ ಸೆಳೆದಿದೆ.

ರಿಯಲ್ ಸ್ಟಾರ್ ಉಪೇಂದ್ರ ಈ ಒಂದು ಹಾಡನ್ನ ಟ್ರೋಲ್ಗಳಿಗೇನೆ ಡೆಡಿಕೇಟ್ ಮಾಡಿದ್ದಾರೆ ಅಂತೆ. ಈ ಹಾಡು ಸಿನಿಮಾದಲ್ಲಿ ಇರುತ್ತಾ..? ಅಥವಾ ಪ್ರಚಾರಕ್ಕಾಗಿ ಮಾಡಿದ್ರಾ ಗೊತ್ತಿಲ್ಲಾ..! ಒಟ್ಟಿನಲ್ಲಿ ಹಾಡು ಸಖತ್ ಮಜವಾಗಿದ್ದು, ಉಪ್ಪಿ ಫುಲ್ ಡಿಫರೆಂಟ್ ಬಿಡಿ ಎಂದು ಹಾಡು ಕೇಳುತ್ತಾ ಅಭಿಮಾನಿಗಳು ಎಂಜಾಯ್ ಮಾಡ್ತಿದ್ದಾರೆ.

ಟೀಸರ್ ಮೂಲಕವೇ ‘ಯುಐ’ ಸಿನಿಮಾ ಬಹಳ ನಿರೀಕ್ಷೆ ಮೂಡಿದ್ದು, ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ನಟ ಉಪೇಂದ್ರ ಅವರೇ ಈ ಸಿನಿಮಾವನ್ನು ನಿರ್ದೇಶಿಸಿ ನಟಿಸುತ್ತಿದ್ದು, ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಮೂಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read