ಯುಪಿಐ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್; ಶೀಘ್ರದಲ್ಲೇ ಡಿಜಿಟಲ್ ಸಾಲ ಸೌಲಭ್ಯ‌ ಸೇವೆ ಸೇರ್ಪಡೆ

ಪೂರ್ವ-ಮಂಜೂರಾದ ಸಾಲ ನೀಡುವ ಸೌಲಭ್ಯವನ್ನು ಯುಪಿಐನಲ್ಲಿ ಒಳಗೊಳ್ಳುವಂತೆ ಕಾರ್ಯಯೋಜನೆಗಳನ್ನು ತರಲು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸ್ತಾವನೆ ಇಟ್ಟಿದೆ.

ಸದ್ಯ ದೇಶದ ಮುಂಚೂಣಿ ಆನ್ಲೈನ್ ಪಾವತಿ ಪ್ಲಾಟ್‌ಫಾರಂ ಆಗಿರುವ ಯುಪಿಐ ಅನೇಕ ಸೌಲಭ್ಯಗಳನ್ನು ಕೊಡಮಾಡುತ್ತಿದೆ. ಭಾರತದ ಡಿಜಿಟಲ್ ಪಾವತಿಗಳ 75%ನಷ್ಟನ್ನು ಯುಪಿಐ ನಿರ್ವಹಿಸುತ್ತಿದೆ.

“ಠೇವಣಿ ಖಾತೆಗಳೊಂದಿಗೆ ಬ್ಯಾಂಕುಗಳಿಂದ ಪೂರ್ವ-ಮಂಜೂರಾತಿ ಪಡೆದ ಸಾಲಗಳ ವರ್ಗಾವಣೆ ಮಾಡುವ ಸೌಲಭ್ಯವನ್ನು ಸಹ ಯುಪಿಐನಲ್ಲಿ ತರಲು ಉದ್ದೇಶಿಸಲಾಗಿದೆ,” ಎಂದು ಆಅರ್‌ಬಿಐ ಗವರ್ನರ್‌ ಶಕ್ತಿಕಾಂತಾ ದಾಸ್ ತಿಳಿಸಿದ್ದಾರೆ.

ಸರಳವಾಗಿ ಹೇಳುವುದಾದರೆ, ಯುಪಿಐ ಮೂಲಕ ಬ್ಯಾಂಕುಗಳು ನೀಡಿದ ಸಾಲದಲ್ಲಿ ಪಾವತಿ ಮಾಡುವ ಸವಲತ್ತನ್ನು ತರುವ ಆಲೋಚನೆ ಇದಾಗಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ವಿಶಿಷ್ಟ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ.

ಸದ್ಯದ ಮಟ್ಟಿಗೆ ಯುಪಿಐ ವ್ಯವಹಾರಗಳು ಬ್ಯಾಂಕುಗಳಲ್ಲಿರುವ ಠೇವಣಿ ಖಾತೆಗಳೊಂದಿಗೆ, ಕೆಲವೊಮ್ಮೆ ವ್ಯಾಲೆಟ್‌ಗಳಂಥ ಪೂರ್ವ-ಪಾವತಿ ಉಪಕರಣಗಳೊಂದಿಗೆ ನಡೆಯುತ್ತಿವೆ. ರೂಪೇ ಕಾರ್ಡ್‌ಗಳನ್ನು ಯುಪಿಐನೊಂದಿಗೆ ಲಿಂಕ್ ಮಾಡಲು ಇತ್ತೀಚೆಗೆ ಅನುಮತಿ ನೀಡಲಾಗಿತ್ತು.

ಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಯುಪಿಐನೊಂದಿಗೆ 400 ಬ್ಯಾಂಕುಗಳು ಹಾಗೂ ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳು ಬೆಸೆದುಕೊಂಡಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read