UPI ಬಳಕೆದಾರರಿಗೆ ಗುಡ್ ನ್ಯೂಸ್: ಸಿಂಗಾಪುರದಲ್ಲೂ ಸೇವೆ ಲಭ್ಯ

ಏಳು ವರ್ಷಗಳ ಹಿಂದೆ ದೇಶದಲ್ಲಿ ಆರಂಭವಾಗಿ ಭಾರಿ ಯಶಸ್ಸು ಕಂಡಿರುವ ಮೊಬೈಲ್ ಮೂಲಕ ಹಣ ಪಾವತಿ ವ್ಯವಸ್ಥೆ ‘ಯುಪಿಐ’ ಸೇವೆ ಈಗ ಸಿಂಗಾಪುರದಲ್ಲೂ ಲಭ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರದಂದು ಇದಕ್ಕೆ ಚಾಲನೆ ನೀಡಿದ್ದಾರೆ.

ಸಿಂಗಾಪುರದ ‘ಪೇ ನೌ’ ಹಾಗೂ ಭಾರತದ ಯುಪಿಐ ನಡುವೆ ಈ ಕುರಿತಂತೆ ಒಪ್ಪಂದ ಏರ್ಪಟ್ಟಿದ್ದು, ಹೀಗಾಗಿ ಬಳಕೆದಾರರು ಸಿಂಗಾಪುರಕ್ಕೆ ಹಣ ಕಳುಹಿಸಬಹುದು ಅಥವಾ ಅಲ್ಲಿಂದ ಹಣ ಸ್ವೀಕರಿಸಬಹುದಾಗಿದೆ.

ಸಿಂಗಾಪುರದಲ್ಲಿ ಬಹಳಷ್ಟು ಮಂದಿ ಭಾರತೀಯರು ವಾಸಿಸುತ್ತಿದ್ದು, ಈವರೆಗೆ ಅವರು ಹಣವನ್ನು ಬ್ಯಾಂಕ್ ಮೂಲಕ ಮಾತ್ರ ಕಳುಹಿಸಬೇಕಾಗಿತ್ತು. ಅಲ್ಲದೆ ಇದಕ್ಕೆ ಶೇಕಡ 10 ಸೇವಾ ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಯುಪಿಐ ಲಭ್ಯವಾಗಿರುವುದರಿಂದ ಅವರುಗಳಿಗೆ ಅನುಕೂಲವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read