UPDATE : ‘ಹತ್ರಾಸ್’ ಕಾಲ್ತುಳಿತದಲ್ಲಿ ಸಾವಿನ ಸಂಖ್ಯೆ 121ಕ್ಕೆ ಏರಿಕೆ, ‘ಭೋಲೆ ಬಾಬಾ’ ನಿಗಾಗಿ ಪೊಲೀಸರ ತೀವ್ರ ಶೋಧ.!

ಉತ್ತರ ಪ್ರದೇಶ : ಹತ್ರಾಸ್ ಕಾಲ್ತುಳಿತದಲ್ಲಿ ಸಾವಿನ ಸಂಖ್ಯೆ 121ಕ್ಕೆ ಏರಿಕೆ ಆಗಿದ್ದು, ಕಾಣೆಯಾದ ‘ಭೋಲೆ ಬಾಬಾ’ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಘಟನೆ ಬಳಿಕ ಕಾಣೆಯಾದ ‘ಭೋಲೆ ಬಾಬಾ’ ನಿಗಾಗಿ ಉತ್ತರ ಪ್ರದೇಶ ಪೊಲೀಸರು ಶೋಧ ನಡೆಸುತ್ತಿದ್ದಾರೆ. ‘ಭೋಲೆ ಬಾಬಾ’ನ ಪಾದ ಸ್ಪರ್ಶಿಸಲು ಜನರ ನಡುವೆ ನೂಕು ನುಗ್ಗಲು ಉಂಟಾಗಿದೆ. ಮೃತರಲ್ಲಿ 108 ಮಹಿಳೆಯರು ಮತ್ತು ಏಳು ಮಕ್ಕಳು ಕೂಡ ಸೇರಿದ್ದಾರೆ. ಭೋಲೆ ಬಾಬನ ಪಾದ ಮುಟ್ಟಲು ಹೋದವರು ದೇವರ ಪಾದ ಸೇರಿರುವುದು ನಿಜಕ್ಕೂ ದುರಂತವೇ ಸರಿ.

ಭೋಲೆ ಬಾಬಾಗಾಗಿ ಬೇಟೆ

ಸಾಕರ್ ವಿಶ್ವ ಹರಿ ಭೋಲೆ ಬಾಬಾ ಎಂದೂ ಕರೆಯಲ್ಪಡುವ ಬಾಬಾ ನಾರಾಯಣ್ ಹರಿ ಅವರನ್ನು ಪತ್ತೆಹಚ್ಚಲು ಮೈನ್ಪುರಿ ಜಿಲ್ಲೆಯ ರಾಮ್ ಕುಟೀರ್ ಚಾರಿಟಬಲ್ ಟ್ರಸ್ಟ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಕ್ಯಾಂಪಸ್ ಒಳಗೆ ಬಾಬಾ ಕಾಣಲಿಲ್ಲ. ಅವರು ಇಲ್ಲಿಲ್ಲ’ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read