ಕಟ್ಟಡದಿಂದ ಹಾರಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಆತ್ಮಹತ್ಯೆ

ಮುಂಬೈ: ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ವಿಮಲೇಶ್ ಆದಿತ್ಯ ಮುಂಬೈನಲ್ಲಿ ಮಂಗಳವಾರ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಿಲಕ್ ನಗರ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅಧಿಕಾರಿ ಸೋಮವಾರ ತನ್ನ ವಸತಿ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಪೊಲೀಸರು ಅವರ ಪತ್ನಿಯನ್ನು ವಿಚಾರಿಸಿದಾಗ, ನನ್ನ ಪತಿ ಮುಂಬೈನಲ್ಲಿ ಬಹಳ ದಿನಗಳಿಂದ ನಿಯೋಜನೆಗೊಂಡಿದ್ದರು. ಇತ್ತೀಚೆಗೆ ಇಲಾಖೆ ಅವರನ್ನು ಲಖನೌಗೆ ವರ್ಗಾವಣೆ ಮಾಡಿದೆ. ಆರಂಭದಲ್ಲಿ ಅವರಿಗೆ ಉತ್ತರ ಪ್ರದೇಶ ಮೂಲದ ಕಚೇರಿಗೆ ಸೇರಲು ಇಷ್ಟವಿರಲಿಲ್ಲ, ಆದರೆ ನಂತರ ಅವರು ಸೇರಲು ಒಪ್ಪಿಕೊಂಡರು ಎಂದು ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read