15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರಗೈದು ಬಾಯಿ ಬಿಡದಂತೆ ಹೇಳಿ ಆಕೆಗೆ 10ರೂ. ಕೊಟ್ಟ ಅಜ್ಜ

ಕಾಮಪಿತ್ತ ಮಿತಿಮೀರಿದ 60 ವರ್ಷದ ಮುದುಕನೊಬ್ಬ ತನ್ನ 15 ವರ್ಷ ವಯಸ್ಸಿನ ಮೊಮ್ಮಗಳ ಮೇಲೆ ಅತ್ಯಾಚಾರಗೈದು, ಈ ವಿಚಾರವನ್ನು ಎಲ್ಲೂ ಬಾಯಿ ಬಿಡದೇ ಇರಲು ಆಕೆಗೆ 10 ರೂಪಾಯಿ ಕೊಟ್ಟ ಹೀನಾಯ ಕೃತ್ಯವೊಂದು ಉತ್ತರ ಪ್ರದೇಶದ ಗೂರಖ್ಪುರದಲ್ಲಿ ಜರುಗಿದೆ.

ಪೊಲೀಸರಿಗೆ ದೂರು ಕೊಟ್ಟಿರುವ ಸಂತ್ರಸ್ತೆಯ ತಾಯಿ ಹೇಳುವಂತೆ: ಬುಧವಾರ ಬೆಳಿಗ್ಗೆಯಂದು ಆಕೆ ಮತ್ತು ಆಕೆಯ ಮಗಳು ಮೇಕೆಗಳನ್ನು ಮೇಯಿಸುತ್ತಿದ್ದರು. ಈ ವೇಳೆ, ತಾಯಿಗೆ ಮನೆಗೆ ಮರಳಲು ಸೂಚಿಸಿದ ಮುದುಕ, ಮಗಳಿಗೆ ಮನೆಯಿಂದ ಸೌದೆ ಕಡಿಯಲು ಕೊಡಲಿ ತರಲು ಹೇಳಿದ್ದಾನೆ. ಕೊಡಲಿ ತಂದುಕೊಟ್ಟ ಮೊಮ್ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಮುದುಕ, ಆಕೆಯನ್ನು ಅಲ್ಲಿ ಅತ್ಯಾಚಾರಗೈದು, ತನ್ನ ಈ ಕೃತ್ಯದ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಹೇಳಿ ಆಕೆಯ ಕೈಗೆ 10 ರೂಪಾಯಿ ಕೊಟ್ಟಿದ್ದಾನೆ.

ಇದೇ ವೇಳೆ ಅದೇ ಪ್ರದೇಶದಲ್ಲಿ ನಡೆದುಕೊಂಡು ಸಾಗುತ್ತಿದ್ದ ಮತ್ತೊಬ್ಬ ಅಪ್ರಾಪ್ತೆ ಈ ಘಟನೆಯನ್ನು ಗಮನಿಸಿದ್ದು, ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣ ಅಕ್ಕಪಕ್ಕದ ಜಾಗಗಳಲ್ಲಿದ್ದ ಜನರು ಅಲ್ಲಿ ನೆರೆದು, ಮುದುಕನಿಗೆ ಧರ್ಮದೇಟು ಕೊಟ್ಟು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಲ್ಲಿನ ಗುಲ್ರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿ ಹಾಗೂ ಆಕೆಯ ಕುಟುಂಬಸ್ಥರು ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಠಾಣಾಧಿಕಾರಿ ಮನೋಜ್ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read