ಮಲ ವಿಸರ್ಜನೆ ಮಾಡುವಾಗ ಹಾವು ದೇಹ ಹೊಕ್ಕಿದೆ ಎಂದ ಭೂಪ…! ಪರೀಕ್ಷಿಸಿ ದಂಗಾದ ವೈದ್ಯರು

ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾಗ ತನ್ನ ಗುದದ್ವಾರದಿಂದ ಹೊಟ್ಟೆಯೊಳಗೆ ಹಾವು ಹೋಗಿದೆಯೆಂದು ವ್ಯಕ್ತಿಯೊಬ್ಬ ಗಾಬರಿಯಿಂದ ಆಸ್ಪತ್ರೆಗೆ ಓಡಿಬಂದ ಘಟನೆ ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ನಡೆದಿದೆ.

ವೈದ್ಯರು ವಿಚಾರಿಸಿದಾಗ ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾಗ ತನ್ನ ಖಾಸಗಿ ಅಂಗದ ಮೂಲಕ ಹಾವು ದೇಹ ಪ್ರವೇಶಿಸಿದೆ. ಇದರಿಂದಾಗಿ ತನಗೆ ಹೊಟ್ಟೆ ನೋಯುತ್ತಿದೆ ಎಂದು ದೂರಿದ್ದ.

ಮಹೇಂದ್ರ ಎಂದು ಗುರುತಿಸಲಾದ ವ್ಯಕ್ತಿ ಮಧ್ಯರಾತ್ರಿ ಹರ್ದೋಯ್ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಆಗಮಿಸಿದ್ದ. ತ್ವರಿತವಾಗಿ ವೈದ್ಯರ ಗಮನ ಸೆಳೆದ ವ್ಯಕ್ತಿಯ ಹೇಳಿಕೆಯಿಂದ ಆಸ್ಪತ್ರೆ ಸಿಬ್ಬಂದಿ ಆತನನ್ನು ಕೂಲಂಕಷವಾಗಿ ಪರೀಕ್ಷಿಸಿದರು.

ಆದರೆ ವ್ಯಕ್ತಿಯ ದೇಹದಲ್ಲಿ ಹಾವಿರುವ ಗುರುತಾಗಲೀ, ಹಾವು ಕಚ್ಚಿರುವ ಕುರುಹು ಆಗಲೀ ಅಥವಾ ದೇಹದೊಳಗೆ ಯಾವುದೇ ಇತರ ವಸ್ತು ಇರುವುದು ಕಂಡುಬಂದಿರಲಿಲ್ಲ.

ಈ ಬಗ್ಗೆ ವೈದ್ಯಕೀಯ ಸಿಬ್ಬಂದಿ ಧೈರ್ಯ ತುಂಬಿದರೂ ಮಹೇಂದ್ರ ಹಾಗೂ ಆತನ ಕುಟುಂಬ ಸದಸ್ಯರು ಎರಡನೇ ಅಭಿಪ್ರಾಯಕ್ಕಾಗಿ ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವಂತೆ ಪಟ್ಟು ಹಿಡಿದರು.

ಆತನನ್ನು ಪರೀಕ್ಷಿಸಿದ ವೈದ್ಯರು, ಆತ ಮಾದಕ ದ್ರವ್ಯದ ಅಮಲಿನಲ್ಲಿ ಈ ರೀತಿ ಹೇಳಿದ್ದರು. ಮರುದಿನ ಬೆಳಿಗ್ಗೆ ಅವನನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read