ಮೃತ ಮಗುವನ್ನು ಚೀಲದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿಗೇ ತಂದ ವ್ಯಕ್ತಿ: ಹೆಚ್ಚಿನ ಹಣ ಕೇಳಿದ ಆಸ್ಪತ್ರೆಗೆ ಬೀಗ ಜಡಿದ ಡಿಸಿ

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹೆರಿಗೆಯ ಸಮಯದಲ್ಲಿ ಸಾವನ್ನಪ್ಪಿದ ತನ್ನ ನವಜಾತ ಶಿಶುವಿನ ಶವವನ್ನು ಹೊತ್ತುಕೊಂಡು ವ್ಯಕ್ತಿಯೊಬ್ಬ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಬಂದಿದ್ದಾನೆ.

ಮೃತ ಮಗುವಿನ ತಂದೆ ವಿಪಿನ್ ಗುಪ್ತಾ, ತನ್ನ ಪತ್ನಿ ಹೆರಿಗೆ ನೋವು ಅನುಭವಿಸುತ್ತಿರುವಾಗ ಆಸ್ಪತ್ರೆ ವೈದ್ಯಕೀಯ ಶುಲ್ಕವನ್ನು ಹೆಚ್ಚಿಸುತ್ತಲೇ ಇತ್ತು ಮತ್ತು ಹೆರಿಗೆ ಮಾಡಿಸದೇ ವಿಳಂಬ ಮಾಡಿದ್ದರು. ಇದು ಮಗುವಿನ ಸಾವಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ನ್ಯಾಯಕ್ಕಾಗಿ ಮಗುವನ್ನು ಚೀಲದಲ್ಲಿ ಹಾಕಿಕೊಂಡು ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ತಲುಪಿದ್ದಾರೆ.

ನವಜಾತ ಶಿಶುವಿನ ಸಾವಿನ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಡಳಿತವು ಗೋಲ್ಡರ್ ಆಸ್ಪತ್ರೆಯನ್ನು ಸೀಲ್ ಮಾಡಿದೆ. ದಾಖಲಾಗಿರುವ ರೋಗಿಗಳನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಲಖಿಂಪುರ ಖೇರಿಯ ಜಿಲ್ಲಾಧಿಕಾರಿ ಹೇಳಿದ್ದಾರೆ.

ಡಿಎಂ ಅವರ ಸೂಚನೆಯ ಮೇರೆಗೆ, ಎಡಿಎಂ ಎ.ಕೆ. ರಸ್ತೋಗಿ ಸೃಜನ್ ಆಸ್ಪತ್ರೆಗೆ ಭೇಟಿ ನೀಡಿ, ಶಿಶುವಿನ ತಾಯಿಯ ಸ್ಥಿತಿಯ ಬಗ್ಗೆ ವಿಚಾರಿಸಿದರು. ಉತ್ತಮ ಚಿಕಿತ್ಸೆಗಾಗಿ ಸೂಚನೆಗಳನ್ನು ನೀಡಿದ್ದು, ಜಿಲ್ಲಾಡಳಿತವು ಪೀಡಿತ ಕುಟುಂಬದೊಂದಿಗೆ ನಿಂತಿದೆ ಎಂದು ಅವರು ಹೇಳಿದ್ದಾರೆ.

ವಿಪಿನ್ ಗುಪ್ತಾ ನೀಡಿದ ಮಾಹಿತಿಯ ಪ್ರಕಾರ, ಆಸ್ಪತ್ರೆಯು ಆರಂಭದಲ್ಲಿ ‘ಸಾಮಾನ್ಯ ಹೆರಿಗೆ’ಗೆ 10,000 ರೂ. ಮತ್ತು ಸಿ-ಸೆಕ್ಷನ್ ಹೆರಿಗೆಗೆ 12,000 ರೂ. ಕೇಳಿತ್ತು. ಆದರೆ, ಅವರ ಪತ್ನಿಗೆ ಹೆರಿಗೆ ನೋವು ಹೆಚ್ಚಾದಾಗ, ಆಸ್ಪತ್ರೆ ದರಗಳನ್ನು ಹೆಚ್ಚಿಸಿತು. ನಾನು ಬೆಳಗಿನ ಜಾವ 2:30 ರೊಳಗೆ ಹಣವನ್ನು ವ್ಯವಸ್ಥೆ ಮಾಡಿದೆ. ನನ್ನ ಹೆಂಡತಿಯನ್ನು ಬೇರೆಡೆಗೆ ಕರೆದೊಯ್ಯಬೇಕೆ ಎಂದೂ ಕೇಳಿದೆ. ಆದರೆ ಅವರು ಶುಲ್ಕವನ್ನು ಮತ್ತಷ್ಟು ಹೆಚ್ಚಿಸುತ್ತಲೇ ಇದ್ದರು. ನಾನು ಹೆಚ್ಚಿನ ಹಣದ ವ್ಯವಸ್ಥೆ ಮಾಡುತ್ತೇನೆ. ಹೆರಿಗೆ ಪ್ರಕ್ರಿಯೆ ಪ್ರಾರಂಭಿಸಿ ಎಂದು ಹೇಳಿದೆ. ಅದಕ್ಕೆ ಅವರು ಮೊದಲು ಹಣವನ್ನು ಕೊಡಬೇಕೆಂದು ಒತ್ತಾಯಿಸಿದ್ದರು. ಸಕಾಲಕ್ಕೆ ಹೆರಿಗೆಯಾಗದೇ ಶಿಶು ಸಾವನ್ನಪ್ಪಿದೆ ಎಂದು ವ್ಯಕ್ತಿ ತಿಳಿಸಿದ್ದಾರೆ.

ತಮ್ಮ ನವಜಾತ ಶಿಶುವಿನ ಮರಣದ ನಂತರ ತನ್ನ ಹೆಂಡತಿಯನ್ನು ರಸ್ತೆಯಲ್ಲಿ “ಎಸೆಯಲಾಯಿತು” ಎಂದು ಆರೋಪಿಸಿದ್ದಾರೆ. “ಮಗು ಸತ್ತುಹೋಯಿತು. ನಂತರ ಅವರು ನನ್ನ ಹೆಂಡತಿಯನ್ನು ರಸ್ತೆಗೆ ಎಸೆದರು. ನಂತರ ನಾವು ಶಸ್ತ್ರಚಿಕಿತ್ಸಕರ ಬಳಿಗೆ ಹೋದೆವು” ಎಂದು ಅವರು ಹೇಳಿದರು.

ನಂತರ ನಾನು ಜಿಲ್ಲಾಧಿಕಾರಿ ಬಳಿಗೆ ಹೋದೆ, ನಾನು ನನ್ನ ಸತ್ತ ಮಗುವನ್ನು ಚೀಲದಲ್ಲಿ ಹೊತ್ತುಕೊಂಡು ಹೋಗುತ್ತಿದ್ದೆ. ಜಿಲ್ಲಾಧಿಕಾರಿ ನನ್ನ ಕಷ್ಟ ಕೇಳಿ ಅವರು ನನ್ನೊಂದಿಗೆ ಇಲ್ಲಿಗೆ ಬಂದರು. ಎಂದು ಗುಪ್ತಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read