ಟೆಡ್ಡಿಬೇರ್ ಡ್ರೆಸ್ ಹಾಕೊಂಡು ರೈಲ್ವೆ ಟ್ರ್ಯಾಕ್ ಬಳಿ ರೀಲ್ಸ್; ಯುವಕ ಈಗ ಪೊಲೀಸರ ಅತಿಥಿ

Up Making Reel On Railway Track Mickey Mouse, Police Arrested - VIDEO: मिक्‍की माउस बनकर रेलवे ट्रैक पर बना रहा था रील, पुलिस ने किया गिरफ़्तार | India In Hindiಇದು ಸೋಶಿಯಲ್ ಮೀಡಿಯಾ ಜಮಾನಾ ಜನರು ಹೊಸ ಹೊಸ ವಿಷಯ ಇಟ್ಟುಕೊಂಡು ಹೊಸ ಹೊಸ ವಿಡಿಯೋ ಮಾಡ್ತಿರ್ತಾರೆ. ಹಾಗಂತ ದಿನಕ್ಕೆ ಒಂದು ವಿಡಿಯೋ ಮಾಡೋದು ಅಷ್ಟು ಸುಲಭದ ಕೆಲಸ ಅಲ್ಲ. ಹೊಸ ಹೊಸ ಕಂಟೆಂಟ್ ಹುಡುಕಿ ಜನರು ಇಷ್ಟ ಪಡುವಂತೆ ಮಾಡೋದೆ ಸವಾಲಿನ ಕೆಲಸ.

ಅದಕ್ಕಾಗಿ ಯೂಟೂಬರ್ಸ್ ಮಾಡೋ ಸರ್ಕಸ್ ಒಂದೆರಡಲ್ಲ. ಇಲ್ಲಿ ನೋಡಿ ಈ ಮಹಾಶಯನನ್ನ, ರೀಲ್ ಮಾಡೋದಕ್ಕಂತಾನೇ ಏನು ಮಾಡಿದ್ದ ಅಂತ. ಸೂರಜ್ ಅನ್ನೋ ಈ ವ್ಯಕ್ತಿ, ಹೀಗೆ ಟೆಡ್ಡಿಬೇರ್ ಡ್ರೆಸ್ ಹಾಕೊಂಡು, ಉತ್ತರ ಪ್ರದೇಶದ ಗೋರಖ್‌ಪುರ್‌ನ ಶೀಮಾನ್ ಜಿ ನಂದಾ ರೈಲ್ವೆ ಕ್ರಾಸಿಂಗ್ ಬಳಿ ನಿಂತಿದ್ದಾನೆ. ಆತ ಅಲ್ಲಿಗೆ ಹೋಗಿದ್ದು, ರೀಲ್ಸ್ ಮಾಡೋದಕೊಸ್ಕರ. ಅಲ್ಲೇ ಇದ್ದ ರೈಲ್ವೆ ಪೊಲೀಸರು ಇದನ್ನ ನೋಡಿದಾಕ್ಷಣ ಆತನನ್ನ ಬಂಧಿಸಿದ್ದಾರೆ.

ಒಂದು ಮಾಹಿತಿ ಪ್ರಕಾರ ಕೆಲವು ದಿನಗಳ ಹಿಂದೆ, ಇದೇ ವ್ಯಕ್ತಿ ಗೋರಖ್ ಪುರ್ ನ ರೈಲ್ವೆ ಗೇಟ್ 157ರ ಬಳಿ ಮಿಕ್ಕಿಮೌಸ್ ಬಟ್ಟೆ ಹಾಕಿಕೊಂಡು ರೀಲ್ ಮಾಡಲು ನೋಡಿದ್ದ. ಆದರೆ ಪೊಲೀಸರನ್ನ ಕಂಡಾಕ್ಷಣ ಅಲ್ಲಿಂದ ಆತ ಓಡಿ ಹೋಗಿದ್ದ. ಪೊಲೀಸರು ಆತನನ್ನ ಹಿಡಿಯಲು ಸಾಧ್ಯವಾಗಿರಲಿಲ್ಲ. ಕಾರಣ ಆತ ಧರಿಸಿದ್ದ ಮಿಕ್ಕಿಮೌಸ್ ಅವತಾರ. ಈಗ ಮತ್ತೆ ಅದೇ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಆದರೆ ಈ ಬಾರಿ 22 ವರ್ಷದ ಯುವಕ ಸಿಕ್ಕಾಕಿಕೊಂಡಿದ್ದು ಆತನನ್ನ ಈಗ ಪೊಲೀಸರು ಸ್ಪೆಷಲ್ ಗೆಸ್ಟ್ ಆಗಿ ಇಟ್ಟುಕೊಂಡಿದ್ದಾರೆ. ಇತ್ತಿಚೆಗೆ ಇಂತಹ ಪ್ರಕರಣಗಳು ಸಾಮಾನ್ಯ ಅನ್ನುವ ಹಾಗಾಗಿದೆ.

https://twitter.com/ndtvindia/status/1617803967374954496?ref_src=twsrc%5Etfw%7Ctwcamp%5Etweetembed%7Ctwterm%5E1617803967374954496%7Ctwgr%5Eb9abe4ea42605d8b7a27a5fb3d0ecb10b13a1417%7Ctwcon%5Es1_&ref_url=https%3A%2F%2Fndtv.in%2Findia%2Fup-making-reel-on-railway-track-mickey-mouse-police-arrested-3719450

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read