ಅತ್ತೆಯಿಂದ ಸೊಸೆಗೆ ಮನಬಂದಂತೆ ಥಳಿತ; ಪತ್ನಿಯನ್ನು ರಕ್ಷಿಸದೆ ವಿಡಿಯೋ ಮಾಡುತ್ತಾ ನಿಂತ ಪತಿ…!

ಸೊಸೆಯನ್ನು ಅತ್ತೆ ಮತ್ತು ನಾದಿನಿ ಕ್ರೂರವಾಗಿ ಥಳಿಸುತ್ತಿದ್ದರೂ , ಪತ್ನಿಯನ್ನು ಕಾಪಾಡದೇ ಗಂಡ ಅದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಭಯಾನಕ ವೀಡಿಯೊದಲ್ಲಿನ ಘಟನೆ ಉತ್ತರ ಪ್ರದೇಶದ ಎಥಾದಲ್ಲಿ ನಡೆದಿದೆ ಎನ್ನಲಾಗಿದೆ. ಥಳಿಸದೇ ಕರುಣೆ ತೋರಿ ಎಂದು ಸೊಸೆ ಮನವಿ ಮಾಡುತ್ತಿದ್ದರೂ ಅತ್ತೆ ಮತ್ತು ನಾದಿನಿ ಆಕೆಯನ್ನು ಕ್ರೂರವಾಗಿ ಥಳಿಸಿದ್ದಾರೆ.

ಸಂತ್ರಸ್ತೆಯ ಪತಿ ತನ್ನ ಮೊಬೈಲ್ ಫೋನ್‌ನಲ್ಲಿ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆಯೇ ಹೊರತು ಪತ್ನಿಯ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ಮುಂದಾಗಲೇ ಇಲ್ಲ.

ಆಘಾತಕಾರಿ ವಿಡಿಯೋದಲ್ಲಿ ಸೊಸೆಯನ್ನು ಆಕೆಯ ಅತ್ತೆ ಮತ್ತು ಅತ್ತಿಗೆ ಎಳೆದೊಯ್ದು ನಿರ್ದಯವಾಗಿ ಥಳಿಸಿದ್ದಾರೆ. ತನ್ನನ್ನು ರಕ್ಷಿಸುವಂತೆ ಮಾವನ ಬಳಿಯೂ ಆಕೆ ಕಣ್ಣೀರು ಹಾಕಿ ಸಹಾಯ ಬೇಡಿದ್ದಾಳೆ. ಅವಳು ಅಳುತ್ತಿದ್ದರೂ ಹಿಂಸಾಚಾರ ಮಾತ್ರ ನಿಲ್ಲಲಿಲ್ಲ. ಆದರೆ ಮಹಿಳೆಯ ಪತಿ ಹಲ್ಲೆಯನ್ನು ನಿಲ್ಲಿಸುವ ಬದಲು ಅದನ್ನು ವಿಡಿಯೋ ಮಾಡುತ್ತಿದ್ದ.

ವರದಿಗಳ ಪ್ರಕಾರ, ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಈ ವಿಡಿಯೋ ವೈರಲ್ ಆದ ಬಳಿಕ ಸಂಬಂಧಿಸಿದ ಠಾಣೆಯ ಪೊಲೀಸರು ಪ್ರತಿಕ್ರಿಯಿಸುತ್ತಾ, “ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಬಂದಿಲ್ಲ. ಆದರೆ, ಪೊಲೀಸ್ ಠಾಣೆಯ ಇನ್‌ಚಾರ್ಜ್ ಜೈತ್ರಾ ಅವರಿಗೆ ನಿಯಮಗಳ ಪ್ರಕಾರ ವೀಡಿಯೊವನ್ನು ತನಿಖೆ ಮಾಡಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ” ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read